ದಾಂಡೇಲಿ: ಪ್ಲೇಹೋಮ್ ಅಥವಾ ನರ್ಸರಿಗೆ ಹೋಗುವ ಮಕ್ಕಳಿಗೆ ಪಾಲಕರು ಹಸಿವಾದಾಗ ತಿನ್ನಲು ಅನುಕೂಲವಾಗುವಂತೆ ಸ್ನ್ಯಾಕ್ಸಗನ್ನ ಕಳುಹಿಸುವುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಅದರಲ್ಲೂ ಬಹುತೇಕರು ಮಕ್ಕಳು ತಿನ್ನಲಿ ಎನ್ನುವ ಉದ್ದೇಶದಿಂದ ಅಂಗಡಿ ತಿಂಡಿಗಳಾದ ಕ್ರೀಮ್ ಬಿಸ್ಕೇಟ್, ಬ್ರೆಡ್ ಕೇಕ್‌ನಂತಹ ತಿಂಡಿಗಳನ್ನೇ ಟಿಫಿನ್‌ಗೆ ಹಾಕಿ ಕಳುಹಿಸುತ್ತಾರೆ.
ಆದರೆ ಇಲ್ಲೊಂದು ಕಡೆ ಮಗುವೊಂದ ಮನೆಯಿಂದ ತಂದಿದ್ದ ಟಿಫಿನ್ ಬಾಕ್ಸ್‌ನಲ್ಲಿದ್ದ ಬಿಸ್ಕೇಟ್‌ನಲ್ಲಿ ಹುಳುಗಳು ಹರಿದಾಡುತ್ತಿದ್ದುದು ಇದೀಗ ಆತಂಕಕ್ಕೆ ಕಾರವಾಗಿದೆ. ಈ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಸ್ಥಳೀಯ ಖಾಸಗಿ ಶಾಲೆಯ ಯುಕೆಜಿ ವಿದ್ಯಾರ್ಥಿಯ ತಾಯಿ ಮಗುವಿಗೆ ಸ್ನ್ಯಾಕ್ಸ್‌ಗಾಗಿ ಕ್ರೀಮ್ ಬಿಸ್ಕೆಟ್ ಹಾಕಿ ಕಳುಹಿಸಿದ್ದರು. ಮಗು ಟಿಫಿನ್ ಬಾಕ್ಸ್ ತೆರೆಯುವಾಗ ಬಿಸ್ಕೆಟ್‌ನಲ್ಲಿ ಹುಳು ಹತ್ತಿರುವುದನ್ನು ಗಮನಿಸಿ ತಕ್ಷಣವೇ ಶಿಕ್ಷಕರಿಗೆ ತಿಳಿಸಿದೆ. ಕೂಡಲೇ ಶಿಕ್ಷಕರು ಬಿಸ್ಕೇಟನ್ನು ತೆರೆದು ನೋಡಿದಾಗ ಬಿಸ್ಕೇಟ್‌ನಲ್ಲಿದ್ದ ಕ್ರೀಮ್ ಮಧ್ಯದಲ್ಲಿ ಹುಳುಗಳು ಹರಿದಾಡುತ್ತಿದುದು ಗಮನಕ್ಕೆ ಬಂದಿದೆ.
ಈ ಕುರಿತು ಶಾಲಾ ಶಿಕ್ಷಕರು ಪೋಷಕರಿಗೆ ಎಚ್ಚರಿಕೆ ನೀಡಿ, ಮಕ್ಕಳಿಗೆ ಟಿಫಿನ್ ಸಿದ್ಧಪಡಿಸುವ ವೇಳೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಹೊರಗಿನ ತಿಂಡಿ ಪದಾರ್ಥಗಳ ಬದಲು ಮನೆಯಲ್ಲೇ ತಯಾರಿಸಿದ ಆಹಾರ ನೀಡುವುದರಿಂದ ಆರೋಗ್ಯಕರ ಬೆಳವಣಿಗೆಗೂ ಪೋಷಕಾಂಶಗಳಿಗೂ ಸಹಾಯಕವಾಗುತ್ತದೆ ಎಂದು ಶಿಕ್ಷಕರು ತಿಳಿಸಿದ್ದಾರೆ.






