ಬೆಂಗಳೂರು: ಸ್ನೇಹಿತೆಯ (friend) ಆತ್ಮಹತ್ಯೆ (suicide) ಯ ಶಾಕ್ ತಡೆಯಲಾಗದೆ, ಮತ್ತೊಬ್ಬ ಬಾಲಕಿಯೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಡೆದಿದೆ.
ಮೃತಳನ್ನು ಶರ್ಮಿಳಾ (Sharmila) (16) ಎಂದು ಗುರುತಿಸಲಾಗಿದ್ದು, ಖಾಸಗಿ ಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಳು. ಅದೇ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಮತ್ತೊಬ್ಬ ಬಾಲಕಿ ಜೊತೆ ಶರ್ಮಿಳಾ ಅತ್ಯಂತ ಆತ್ಮೀಯರಾಗಿದ್ದರು.
ಕಳೆದ ಎರಡು ಮೂರು ತಿಂಗಳ ಹಿಂದೆ ಶರ್ಮಿಳಾಳ ಸ್ನೇಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ ಘಟನೆ ಬಳಿಕ ಸ್ನೇಹಿತೆಯನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಳು. ಇದೇ ಆಘಾತದಿಂದ ಆಕೆ ಈ ನಿರ್ಧಾರ ಕೈಗೊಂಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆಯ ಸಮಯದಲ್ಲಿ ಶರ್ಮಿಳಾಳ ಪೋಷಕರು ತಮಿಳುನಾಡಿಗೆ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (suicide)ಗೆ ಶರಣಾಗಿದ್ದಾಳೆ.
ಘಟನೆ ಕಲಾಸಿಪಾಳ್ಯ ಹೋಟೆಲ್ ಮಯೂರ ಪಕ್ಕದ ರಸ್ತೆಯ ಮನೆಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ಕಲಾಸಿಪಾಳ್ಯ ಪೊಲೀಸರು (Kalasipalya Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ಶವಾಗಾರಕ್ಕೆ ( Victoria Hospital mortuary) ರವಾನಿಸಲಾಗಿದೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ಎಂದು ದಾಖಲಿಸಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.






