ಚಿಕ್ಕಮಗಳೂರು: ಗ್ರಾಮಸ್ಥರ ಮದುವೆಗೆ ಹೋಗಿ ಮದ್ಯ (alcohol) ಸೇವಿಸಿದ್ದಕ್ಕೆ ಅಪ್ಪ ಬೈಯ್ತಾರೆ ಎಂಬ ಭಯದಿಂದ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮೇಲ್ಪಾಲ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಆತ್ಮಹತ್ಯೆಗೆ ಶರಣಾದ ಬಾಲಕನನ್ನು ಪ್ರವಚನ್ (13) (Pravachan) ಎಂದು ಗುರುತಿಸಲಾಗಿದೆ. ಈತ ಮೇಲ್ಪಾಲ್ ಸರ್ಕಾರಿ ಶಾಲೆ (Melpal Government School) ಯಲ್ಲಿ 9ನೇ ತರಗತಿ ಓದುತ್ತಿದ್ದನು.
ಗ್ರಾಮಸ್ಥರ ಮದುವೆ ಸಮಾರಂಭಕ್ಕೆ ಹೋಗಿದ್ದ ಪ್ರವಚನ್, ಅಲ್ಲಿ ಸ್ನೇಹಿತರ ಜೊತೆ ಸೇರಿಕೊಂಡು ಮದ್ಯ ಸೇವಿಸಿದ್ದ ಎನ್ನಲಾಗಿದೆ.
ಮದ್ಯ (alcohol) ಸೇವಿಸಿದ್ದ ವಿಷಯ ಅಪ್ಪನಿಗೆ ಗೊತ್ತಾದರೆ ಬೈಯ್ತಾರೆ ಎಂಬ ತೀವ್ರ ಭಯದಿಂದ ಆತಂಕಗೊಂಡ ಬಾಲಕ, ಮನೆ ಬಳಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೂಡಲೇ ಪೋಷಕರು ಬಾಲಕನನ್ನು ಆಸ್ಪತ್ರೆಗೆ ಕರೆತಂದರೂ, ಆಸ್ಪತ್ರೆಗೆ (hospital) ಬರುತ್ತಿದ್ದಂತೆಯೇ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಟ್ಟಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






