Home State Politics National More
STATE NEWS

Highcourt Order: ಧರ್ಮಸ್ಥಳ `ಬುರುಡೆ ಗ್ಯಾಂಗ್‌’ಗೆ ಹೈಕೋರ್ಟ್ ಶಾಕ್…!

Stay order lifted on SIT investigation into Dharma
Posted By: Sagaradventure
Updated on: Nov 12, 2025 | 8:27 AM

ಬೆಂಗಳೂರು: ​ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಈ ಮೂಲಕ ಈ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್ಐಟಿ) ಮುಂದುವರಿಸಲು ಹೈಕೋರ್ಟ್ ಪೀಠವು ಅನುಮತಿ ನೀಡಿದೆ.

ಎಸ್ಐಟಿ ತನಿಖೆಗೆ ಇದ್ದ ತಡೆಯಾಜ್ಞೆ ತೆರವುಗೊಂಡಿರುವುದು ‘ಬುರುಡೆ ಗ್ಯಾಂಗ್’ ಎಂದು ಕರೆಯಲ್ಪಡುವ ಧರ್ಮದ್ರೋಹಿಗಳಿಗೆ ಭಾರೀ ಆಘಾತ ನೀಡಿದೆ ಎನ್ನಲಾಗಿದೆ. ​ತಡೆಯಾಜ್ಞೆ ತೆರವುಗೊಂಡಿರುವ ಹಿನ್ನೆಲೆಯಲ್ಲಿ, ಪ್ರಮುಖ ಆರೋಪಿಗಳಾದ ಮಹೇಶ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣ ನೇತೃತ್ವದ ತಂಡಕ್ಕೆ ಮತ್ತೆ ಬಂಧನದ ಭೀತಿ ಶುರುವಾಗಿದೆ.

ಈ ಹಿಂದೆ, ಎಸ್ಐಟಿ ಅಧಿಕಾರಿಗಳು ಬುರುಡೆ ಗ್ಯಾಂಗ್‌ನ ಹಲವು ಸದಸ್ಯರನ್ನು ನಿರಂತರವಾಗಿ ವಿಚಾರಣೆಗೊಳಪಡಿಸಿದ್ದರು. ಆದರೆ, ಹೈಕೋರ್ಟ್‌ನಿಂದ ತಡೆಯಾಜ್ಞೆ ಬಂದ ಕಾರಣ ತನಿಖೆಗೆ ಹಿನ್ನಡೆಯಾಗಿತ್ತು. ಈಗ ನ್ಯಾಯಾಲಯದಿಂದ ಸ್ಪಷ್ಟ ಆದೇಶ ಬಂದಿರುವ ಹಿನ್ನೆಲೆಯಲ್ಲಿ, ಎಸ್ಐಟಿ ಪೊಲೀಸರು ಮುಂದಿನ ಕ್ರಮಕ್ಕಾಗಿ ಸಿದ್ಧರಾಗಿದ್ದಾರೆ.

Shorts Shorts