ಬೆಂಗಳೂರು: ನಟ ರಿಯಲ್ ಸ್ಟಾರ್ ಉಪೇಂದ್ರ (Upendra)ಮತ್ತು ಅವರ ಪತ್ನಿ ಪ್ರಿಯಾಂಕ ಉಪೇಂದ್ರ (Priyanka Upendra) ಅವರ ಮೊಬೈಲ್ ಹ್ಯಾಕ್ ಮಾಡಿ ಹಣವನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ (Police) ರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:
ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಾಯಕಿ ಅನನ್ಯಾ ಭಟ್!
ಬಂಧಿತ ಆರೋಪಿ ಬಿಹಾರ (Bihar)ದ ನಳಂದ ಮೂಲದ ವಿಕಾಸ್ ಕುಮಾರ್ (Vikas Kumar) ಎಂದು ತಿಳಿದುಬಂದಿದ್ದು, ಈತ ಉಪೇಂದ್ರ ದಂಪತಿಯ ಮೊಬೈಲ್ ಅನ್ನು ಹ್ಯಾಕ್ ಮಾಡುವ ಮೂಲಕ ಅವರ ಖಾತೆಯಿಂದ ಒಂದೂವರೆ ಲಕ್ಷ ರೂಪಾಯಿ (₹1.5 lakh) ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದ.
ಉಪ್ಪಿ ಕುಟುಂಬದ ಖಾತೆಯಿಂದ ಎಗರಿಸಿದ್ದ ಈ ಹಣವನ್ನು ಆರೋಪಿ ಡ್ರಾ ಮಾಡಿಕೊಂಡು ಮೋಜು ಮಸ್ತಿ ಮಾಡಲು ಬಳಸಿಕೊಂಡಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ.






