Home State Politics National More
STATE NEWS

Dating App | ಯುವತಿಯ ಆಮಿಷಕ್ಕೆ ಒಳಗಾದ ವ್ಯಕ್ತಿ, ಕಳೆದುಕೊಂಡದ್ದು ಕೋಟಿ ಕೋಟಿ!

Dating App
Posted By: Meghana Gowda
Updated on: Nov 13, 2025 | 4:42 AM

ಬೆಂಗಳೂರು: ಡೇಟಿಂಗ್ ಅಪ್ಲಿಕೇಶನ್ (dating application) ಮೂಲಕ ಪರಿಚಯವಾದ ಯುವತಿಯೊಬ್ಬಳು ವೃದ್ಧಾಶ್ರಮ ಕಟ್ಟಿಸುವ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಆಮಿಷವೊಡ್ಡಿ, ಬೆಂಗಳೂರಿನ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹1.29 ಕೋಟಿ (₹1.29 crore ) ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

‘ಕ್ವಾಕ್ ಕ್ವಾಕ್ ಆಪ್’ (QUACK QUACK APP) ಎಂಬ ಡೇಟಿಂಗ್ ಆಪ್‌ನಲ್ಲಿ ಈ ವ್ಯಕ್ತಿಗೆ ಮೇಘನಾ ರೆಡ್ಡಿ (Meghana Reddy) ಎಂದು ಪರಿಚಯ ಮಾಡಿಕೊಂಡಿದ್ದ ಯುವತಿ, ಬಳಿಕ ಟೆಲಿಗ್ರಾಮ್ (Telegram) ಮೂಲಕ ಚಾಟಿಂಗ್ ಮುಂದುವರಿಸಿದ್ದಳು.

ನಿಮ್ಮ ತಂದೆಯ ಹೆಸರಿನಲ್ಲಿ ಒಂದು ವೃದ್ಧಾಶ್ರಮ ಕಟ್ಟಿಸುವುದಾಗಿ ಆಸೆ ತೋರಿಸಿದ ಯುವತಿ, ಅದಕ್ಕಾಗಿ ಷೇರು ಮಾರುಕಟ್ಟೆಯಲ್ಲಿ (Share Market) ಹಣ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿದ್ದಳು. ಆಕೆಯ ಮಾತು ನಂಬಿದ ವ್ಯಕ್ತಿ, ಆಕೆ ನೀಡಿದ ವೆಬ್‌ಸೈಟ್ ಒಂದರ ಮೂಲಕ ಹಂತ ಹಂತವಾಗಿ ಒಟ್ಟು ₹1.29 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ, ಯುವತಿ ಯಾವುದೇ ಲಾಭ ನೀಡದೆ, ಅಸಲು ಹಣವನ್ನೂ ವಾಪಸ್ ನೀಡದೆ ವಂಚಿಸಿದ್ದಾಳೆ.

ಈ ಸೈಬರ್ ವಂಚನೆ ಕುರಿತು ಬೆಂಗಳೂರು ಉತ್ತರ ಸೈಬರ್ ಕ್ರೈಂ ಠಾಣೆ (Cyber Crime Police Station) ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Shorts Shorts