ಬೆಂಗಳೂರು: ಡೇಟಿಂಗ್ ಆಪ್ (Dating application) ಮೂಲಕ ಪರಿಚಯವಾದ ಯುವತಿಯೊಬ್ಬಳು ಯುವಕನನ್ನು ಮೋಸಗೊಳಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನ (Gold) ಮತ್ತು ನಗದು (Cash) ಕಸಿದುಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸುಮಾರು ಎರಡು ತಿಂಗಳ ಹಿಂದೆ Happn ಆಪ್‌ನಲ್ಲಿ “ಕವಿಪ್ರಿಯಾ” (Kavipriya) ಎಂಬ ಹೆಸರಿನ ಯುವತಿಯೊಂದಿಗೆ ಯುವಕನಿಗೆ ಪರಿಚಯ ಆಗಿತ್ತು. ಇಬ್ಬರ ನಡುವಿನ ಸಂಭಾಷಣೆ ಬೆಳೆಯುತ್ತಿದ್ದಂತೆ, ಅವರು ನವೆಂಬರ್ 1ರಂದು ಇಂದಿರಾನಗರದ ರೆಸ್ಟೋರೆಂಟ್‌ನಲ್ಲಿ ಭೇಟಿಯಾದರು.
ರೆಸ್ಟೋರೆಂಟ್ (Restaurant)ನಲ್ಲಿ ಇಬ್ಬರೂ ಮದ್ಯಪಾನ ಮಾಡಿ, ಬಳಿಕ ಕವಿಪ್ರಿಯಾ ಯುವಕನನ್ನು ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಳು. ರಾತ್ರಿ ಊಟವನ್ನು ಆಕೆ ಸ್ವತಃ ಆರ್ಡರ್ ಮಾಡಿ ತರಿಸಿಕೊಂಡು, ಬಳಿಕ ಯುವಕನಿಗೆ ನೀರು ನೀಡಿದ್ದಳು. ಆ ನೀರು ಕುಡಿದ ತಕ್ಷಣ ಯುವಕ ಪ್ರಜ್ಞೆ ತಪ್ಪಿದ್ದಾನೆ. ಎಚ್ಚರವಾದಾಗ, ಆಕೆ ಸ್ಥಳದಲ್ಲಿ ಇರಲಿಲ್ಲ.
ಯುವಕನ ಬಳಿ ಇದ್ದ ₹6.89 (₹6.89 lakh ) ಲಕ್ಷ ಮೌಲ್ಯದ ವಸ್ತುಗಳು ಮಾಯವಾಗಿದ್ದವು. ಅವುಗಳಲ್ಲಿ ಹೆಡ್‌ಸೆಟ್, 28 ಗ್ರಾಂ ಚಿನ್ನದ ಸರ, 30 ಗ್ರಾಂ ಚಿನ್ನದ ಕೈ ಬಳೆ ಮತ್ತು ₹10 ಸಾವಿರ ನಗದು ಸೇರಿವೆ. ಈ ಘಟನೆ ಕುರಿತು ಯುವಕ ಇಂದಿರಾನಗರ ಠಾಣೆಗೆ (Indiranagar Police Station) ದೂರು ನೀಡಿದ್ದಾನೆ.






