ಬೆಂಗಳೂರು: ನಗರದ ಪ್ರತಿಷ್ಠಿತ ಪಿಇಎಸ್ (PES) ಕಾಲೇಜಿನ ವಿದ್ಯಾರ್ಥಿನಿ (students)ಯರೇ ಶಾಕ್ ಆಗುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಲೇಜಿನ ಮುಂಭಾಗದಲ್ಲೇ ಜ್ಯೂಸ್ ಅಂಗಡಿ ಇಟ್ಟುಕೊಂಡಿದ್ದ ಕಾಮುಕನೊಬ್ಬ, 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಅಸಭ್ಯ ಫೋಟೋ ( 3,000 such inappropriate photos )ಗಳನ್ನು ತೆಗೆದು ಮೊಬೈಲ್‌ನಲ್ಲಿ ಸಂಗ್ರಹಿಸಿದ್ದಾನೆ.
ಹೊಸಕೆರೆಹಳ್ಳಿ ಸಮೀಪದ ಪಿಇಎಸ್ ಕಾಲೇಜಿ (PES College) ನ ಮುಂಭಾಗದಲ್ಲಿರುವ ಜ್ಯೂಸ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದ್ದು, ಜ್ಯೂಸ್ ಅಂಗಡಿಗೆ ಬರುವ ಕಾಲೇಜು ವಿದ್ಯಾರ್ಥಿನಿಯರ ಅಸಭ್ಯ ಫೋಟೋಗಳನ್ನು ಈ ಕಾಮುಕ ರಹಸ್ಯವಾಗಿ ಕ್ಲಿಕ್ಕಿಸುತ್ತಿದ್ದ. ಈತನ ಮೊಬೈಲ್ ಪರಿಶೀಲಿಸಿದಾಗ, ಒಂದಲ್ಲ ಎರಡಲ್ಲ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿನಿಯರ ಅಸಭ್ಯ ಚಿತ್ರಗಳು ಪತ್ತೆಯಾಗಿವೆ.
ಜ್ಯೂಸ್ ಅಂಗಡಿಗೆ ಬಂದ ಗ್ರಾಹಕರ ಕೈಗೆ ಈತ ರೆಡ್ ಹ್ಯಾಂಡ್ (Red-Handed) ಆಗಿ ಸಿಕ್ಕಿಬಿದ್ದಿದ್ದಾನೆ. ವಿದ್ಯಾರ್ಥಿನಿಯರು ಆತನ ಮೊಬೈಲ್ ಓಪನ್ ಮಾಡಿ ನೋಡಿದಾಗ, ಈತನ ಕೃತ್ಯ ಬೆಳಕಿಗೆ ಬಂದಿದ್ದು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಬರುವ ಮುನ್ನವೇ ಈತ ತನ್ನ ತಪ್ಪು ಒಪ್ಪಿಕೊಂಡು, ‘ತಪ್ಪಾಯಿತು, ಕ್ಷಮಿಸಿ’ ಎಂದು ಬೇಡಿಕೊಂಡಿದ್ದಾನೆ. ಆದರೆ, ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.






