ಬೆಂಗಳೂರು:ಕರ್ಣಾಟಕ ಬ್ಯಾಂಕ್ (Karnataka Bank) ನಲ್ಲಿ ಅಚ್ಚರಿ ಮೂಡಿಸುವಂತಹ ತಾಂತ್ರಿಕ ಪ್ರಮಾದವೊಂದು ತಡವಾಗಿ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಸಿಬ್ಬಂದಿ (Staff)ಯೊಬ್ಬರು ಸುಮಾರು ಎರಡು ವರ್ಷಗಳ ಹಿಂದೆ, ತಪ್ಪಾದ ಖಾತೆಗೆ ಬರೋಬ್ಬರಿ ₹1,00,000 ಕೋಟಿ (₹1,00,000 crore ) ಹಣವನ್ನು ವರ್ಗಾಯಿಸಿದ್ದರು ( transferred) ಎಂದು ವರದಿಯಾಗಿದೆ.
2023ರ ಆಗಸ್ಟ್ 9 ರಂದು ಸಂಜೆ 5:17 ರ ವೇಳೆಯಲ್ಲಿ ಸಿಬ್ಬಂದಿಯು ಈ ಬೃಹತ್ ಮೊತ್ತವನ್ನು ಒಂದು ನಿಷ್ಕ್ರಿಯ (Inactive) ಉಳಿತಾಯ ಖಾತೆ (SB ಖಾತೆ)ಗೆ ವರ್ಗಾಯಿಸಿದ್ದರು. ತಕ್ಷಣವೇ ಈ ತಪ್ಪು ಗಮನಕ್ಕೆ ಬಂದಿದ್ದು, ಬ್ಯಾಂಕ್ ಸಿಬ್ಬಂದಿ ವರ್ಗಾವಣೆ ಮಾಡಿದ ಹಣವನ್ನು ವಾಪಸ್ ಪಡೆಯುವಷ್ಟರಲ್ಲಿ ರಾತ್ರಿ 8:09 ಆಗಿತ್ತು.
ಸುಮಾರು 3 ಗಂಟೆಗಳ ಕೆಲಸ ಮಾಡಿ ಹಿಂಪಡೆದಿದ್ದರು. ಒಂದು ವೇಳೆ ಸಕ್ರಿಯ ಖಾತೆಯಾಗಿದ್ದು, ಈ ಹಣ ಕಳೆದುಹೋಗಿದ್ದರೆ ಬ್ಯಾಂಕ್ ದಿವಾಳಿ ಏಳಬಹುದಿತ್ತು.
ಇಂತಹ ಗಂಭೀರ ಪ್ರಮಾದವನ್ನು ಬ್ಯಾಂಕಿನ ಆಡಳಿತ ಮಂಡಳಿಯ ಗಮನಕ್ಕೆ ತರಲು ಬರೋಬ್ಬರಿ ಆರು ತಿಂಗಳ ಕಾಲಾವಕಾಶ ತೆಗೆದುಕೊಂಡಿದೆ. ಈ ಮಹಾ ಪ್ರಮಾದ ಮತ್ತು ತಡವಾಗಿ ವರದಿ ಮಾಡಿದ ಹಿನ್ನೆಲೆಯಲ್ಲಿ, ಕರ್ಣಾಟಕ ಬ್ಯಾಂಕಿನ ಕೆಲವು ಹಿರಿಯ ಅಧಿಕಾರಿಗಳನ್ನು(senior officials ) ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಮನಿ ಕಂಟ್ರೋಲ್ ವೆಬ್ಸೈಟ್ ತನ್ನ ಬೆಬ್‌ಸೈಟ್ ನಲ್ಲಿ ಪ್ರಕಟಿಸಿದೆ.






