ತುಮಕೂರು: ತುಮಕೂರು ನಗರದಲ್ಲಿ ಮತ್ತೆ ರಕ್ತ ಹರಿದಿದ್ದು, ತಡರಾತ್ರಿ ನಡೆದ ಮಾರಣಾಂತಿಕ ದಾಳಿಯಲ್ಲಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು,(Dead) ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ.
ನಿನ್ನೆ ರಾತ್ರಿ 11:30ರ ಸುಮಾರಿನಲ್ಲಿ ತುಮಕೂರು ಔಟರ್ ರಿಂಗ್ ರಸ್ತೆ (Tumakuru Outer Ring Road) ಯ, ಎಸ್‌ಎಚ್‌ಕೆ ಲಾಡ್ಜ್‌ನ ಹಿಂಭಾಗದಲ್ಲಿ ಈ ದಾಳಿ ನಡೆದಿದೆ.
ಅಭಿ (28) (Abhi) ಅಲಿಯಾಸ್ ಟಿಬೆಟ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ ತುಮಕೂರಿನ ಕ್ಯಾತಸಂದ್ರ (Kyathasandra) ಮೂಲದವನಾಗಿದ್ದು, ಜಾಸ್ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದನು. ಇನ್ನೊಬ್ಬ ಮನೋಜ್ (32) (Manoj) ಅಲಿಯಾಸ್ ಪ್ಯಾಚ್ ನ ಸ್ಥಿತಿ ಗಂಭೀರವಾಗಿದ್ದು, ಇವರಿಬ್ಬರು ಸ್ನೇಹಿತನ ಬರ್ತ್ ಡೆ ಪಾರ್ಟಿಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಹಂತಕರು ಲಾಂಗು ಮತ್ತು ಮಚ್ಚುಗಳನ್ನು ಬಳಸಿ ಈ ಇಬ್ಬರ ಮೇಲೆ ಅಟ್ಯಾಕ್ ಮಾಡಿದ್ದು, ಮೃತ ಅಭಿ ಹೊಟ್ಟೆಗೆ ಡ್ರ್ಯಾಗರ್ (Dagger) ನಿಂದ ಇರಿದು, ಮುಖದ ಮೇಲೆ ಹತ್ತು ಬಾರಿ ಲಾಂಗ್ ಮತ್ತು ಮಚ್ಚುಗಳಿಂದ ಭೀಕರವಾಗಿ ದಾಳಿ ಮಾಡಲಾಗಿದೆ. ಬಳಿಕ ಮನೋಜ್ ಅಲಿಯಾಸ್ ಪ್ಯಾಚ್ ಅವರ ತಲೆ (Head)ಗೆ ಮಚ್ಚು ಬೀಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತುಮಕೂರು ಜಿಲ್ಲಾ ಎಸ್ಪಿ ಅಶೋಕ್ ಕೆ.ವಿ. (SP Ashok K.V.) ಅವರು ಸ್ಥಳಕ್ಕೆ ಹಾಗೂ ಆಸ್ಪತ್ರೆ(Hospital)ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದಾಳಿಗೆ ನಿಖರ ಕಾರಣ ಏನು, ಯಾರು ಈ ಕೃತ್ಯ ಎಸಗಿದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.






