ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ (actor Darshan) ಗೆ ‘ರಾಜಾತಿಥ್ಯ’ (VVIP treatment)ನೀಡಲಾಗಿತ್ತು ಎಂಬ ಆರೋಪದಡಿ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣಗಳ ಚಾರ್ಜ್‌ಶೀಟ್ (charge sheets) ಗಳು ಒಂದು ವರ್ಷ ಕಳೆದರೂ ಇನ್ನೂ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆಗಳ ವಿಳಂಬವು ಜೈಲಿನ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಹೆಚ್ಚಿಸಿದೆ.
2024ರ ಸೆಪ್ಟೆಂಬರ್‌ನಲ್ಲಿ ದರ್ಶನ್‌ಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿದ್ದವು- 1. ದರ್ಶನ್ ಕೈಗೆ ಸಿಗರೇಟ್ ತಲುಪಿದ್ದರ ಬಗ್ಗೆ. 2.ದರ್ಶನ್ ಜೈಲಿನಲ್ಲಿ ಮೊಬೈಲ್ ಬಳಸಿದ್ದರ ಬಗ್ಗೆ ಹಾಗೂ 3ನೇಯದು ಮಧ್ಯರಾತ್ರಿ ವಸ್ತುಗಳ ಅನಧಿಕೃತ ಸಾಗಾಣಿಕೆ ಬಗ್ಗೆ.
ಮೊದಲ ಎರಡು ಕೇಸ್‌ಗಳಲ್ಲಿ ನಟ ದರ್ಶನ್ ಮತ್ತು ಕೆಲವು ರೌಡಿಗಳು ಆರೋಪಿಗಳಾಗಿದ್ದರೆ, ಮೂರನೇ ಕೇಸ್‌ನಲ್ಲಿ ಒಬ್ಬ ಕೈದಿ ಹಾಗೂ ಮೂವರು ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಆರೋಪಿಯಾಗಿದ್ದರು. ಆದರೆ ಈ ಮೂರು ಪ್ರಕರಣಗಳ ಅಂತಿಮ ವರದಿ (charge sheets ) ಇನ್ನೂ ಕೋರ್ಟ್‌ಗೆ ಸಲ್ಲಿಕೆಯಾಗಿಲ್ಲ. ಸದ್ಯಕ್ಕೆ ಇದು ಸರ್ಕಾರಿ ಅಭಿಯೋಜಕರ ಪರಿಶೀಲನೆಯಲ್ಲಿ ಉಳಿದಿದೆ.
ತನಿಖೆ ಆರಂಭವಾದ 6 ತಿಂಗಳ ಬಳಿಕವೇ ಜೈಲು ಅಧಿಕಾರಿಗಳ ವಿಚಾರಣೆಗೆ ಅನುಮತಿ ದೊರೆತಿತ್ತು. ಅಧಿಕಾರಿಗಳ ವಿರುದ್ಧ ಪಿಸಿ ಆಕ್ಟ್ (Prevention of Corruption Act) ಅಡಿಯಲ್ಲಿ ತನಿಖೆ ನಡೆಸಿ, ಹೇಳಿಕೆಗಳನ್ನು ದಾಖಲಿಸಲಾಗಿತ್ತು. ಮೂರೂ ಪ್ರಕರಣಗಳಲ್ಲಿ ಅಧಿಕಾರಿಗಳ ಕೈವಾಡದ ಬಗ್ಗೆ ಸಾಕ್ಷ್ಯ ಲಭ್ಯವಾಗಿದ್ದರೂ, ವರದಿ ಸಲ್ಲಿಕೆ ಬಾಕಿ ಇದೆ.
ದರ್ಶನ್ ರಾಜಾತಿಥ್ಯ ಪ್ರಕರಣದ ನಂತರವೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಿಂತಿಲ್ಲ. ಇದುವರೆಗೆ ಜೈಲಿನಲ್ಲಿ ಮೊಬೈಲ್, (mobile phones) ಮಾದಕ ವಸ್ತು (Narcotics), ಮತ್ತು ಮಾರಕಾಸ್ತ್ರಗಳು ಪತ್ತೆಯಾದ ಬಗ್ಗೆ 30ಕ್ಕೂ ಹೆಚ್ಚು ಹೊಸ ಕೇಸ್‌ಗಳು (30 new cases) ದಾಖಲಾಗಿವೆ.
ಈ ಹೊಸ ಪ್ರಕರಣಗಳ ಪೈಕಿ 27 ಕೇಸ್‌ಗಳ ಅಂತಿಮ ವರದಿ ಕೋರ್ಟ್‌ಗೆ ಸಲ್ಲಿಕೆಯಾಗುವುದು ಬಾಕಿ ಇದೆ. ಸುಮಾರು 25 ಕೇಸ್‌ಗಳ ತನಿಖೆ ಪ್ರಾರಂಭಿಸಿ 6 ತಿಂಗಳು ಕಳೆದಿದ್ದರೂ, ಪರಿಶೀಲನೆ, ಅನುಮತಿ ಮತ್ತು ಸಿಡಿಆರ್ (CDR) ಡಿಟೇಲ್ಸ್ ಬಾಕಿ ಇರುವ ಕಾರಣ ಅಂತಿಮ ವರದಿ ಸಲ್ಲಿಕೆಯಾಗದೆ ಪೆಂಡಿಂಗ್ (pending) ನಲ್ಲಿವೆ.






