ಬೆಳಗಾವಿ: ನಕಲಿ ಕಾಲ್ ಸೆಂಟರ್ (Fake Call Center) ತೆರೆದು ಅಮೆರಿಕದ ಪ್ರಜೆಗಳಿಗೆ ‘ಡಿಜಿಟಲ್ ಅರೆಸ್ಟ್’ (Digital Arrest) ತಂತ್ರದ ಮೂಲಕ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಳಗಾವಿ ಪೊಲೀಸರು ಭೇದಿಸಿದ್ದು, ಘಟನೆಗೆ ಸಂಬಂಧಿಸಿದಂತೆ 33 ಜನರನ್ನು ಗುರುವಾರ ಬಂಧಿಸಿದ್ದಾರೆ.
ನಗರದ ಬಾಕ್ಸೈಟ್ ರಸ್ತೆಯಲ್ಲಿರುವ ಕುಮಾರ್ ಹಾಲ್ ನಲ್ಲಿ ನಕಲಿ ಕಾಲ್ ಸೆಂಟರ್ ತೆರೆದಿದ್ದ ಆರೋಪಿಗಳು ಕಾಲ್ ಸೆಂಟರ್ ಮೂಲಕ ಅಮೆರಿಕನ್ ಪ್ರಜೆಗಳನ್ನು ಸಂಪರ್ಕಿಸಿ, ಅವರನ್ನು ಡಿಜಿಟಲ್ ಅರೆಸ್ಟ್‌ನ (Digital Arrest) ಬೆದರಿಕೆ ಒಡ್ಡಿ ಹಣ ವಸೂಲಿ ಮಾಡುತ್ತಿದ್ದರು.
ಇಲ್ಲಿ ಕೆಲಸ ಮಾಡುವ ಯುವಕರಿಗೆ ಪ್ರತಿ ತಿಂಗಳು ₹18 ಸಾವಿರದಿಂದ ₹45 ಸಾವಿರದವರೆಗೆ ವೇತನ ನೀಡಲಾಗುತ್ತಿತ್ತು ಹಾಗೂ ಅವರು ಉಳಿದುಕೊಳ್ಳುವುದಕ್ಕೆ ವಸತಿ ವ್ಯವಸ್ಥೆ ಕೂಡ ಮಾಡಿಕೊಡಲಾಗಿತ್ತು. ಇಲ್ಲಿನ ಚಟುವಟಿಕೆಗೆ ಬಗ್ಗೆ ಅನುಮಾನ ಬಂದ ಸ್ಥಳೀಯರು ಪೊಲೀಸರಿಗೆ ಪತ್ರ ಬರೆದಿದ್ದು, ಇದನ್ನು ಆದಾರವಾಗಿಟ್ಟುಕೊಂಡು ಪೊಲೀಸರು ದಾಳಿ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿಸಿದ 33 ಜನರಲ್ಲಿ ಅಸ್ಸಾಂ, ಮೇಘಾಲಯ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಭಾರತದ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದು, ಅವರಲ್ಲಿ ಒಬ್ಬ ನೇಪಾಳದ ಪ್ರಜೆ(Nepalese citizen) ಯೂ ಸೇರಿದ್ದು, ಆರೋಪಿಗಳಿಂದ 37 ಹೈಟೆಕ್ ಲ್ಯಾಪ್‌ಟಾಪ್‌ಗಳು ಮತ್ತು 37 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ವಂಚನೆ ಜಾಲದ ಮಾಸ್ಟರ್ ಮೈಂಡ್‌ಗಳು ಎಂದು ಹೇಳಲಾದ ಇಬ್ಬರು ಪ್ರಮುಖ ಆರೋಪಿಗಳು ಸದ್ಯ ಗುಜರಾತ್ ಮತ್ತು ಪಶ್ಚಿಮ ಬಂಗಾಳ (Gujarat and West Bengal) ದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದ್ದು, ಬೆಳಗಾವಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ (Investigation) ಮುಂದುವರೆಸಿದ್ದಾರೆ.






