ಚಿಕ್ಕಬಳ್ಳಾಪುರ : ಹಳೆಯ ದ್ವೇಷದ ಕಾರಣದಿಂದಾಗಿ ಅಪರಿಚಿತರು ಊಟದ ಸಾಂಬಾರ್‌ಗೆ ವಿಷ (poison) ಬೆರೆಸಿದ ಊಟವನ್ನು ಸೇವಿಸಿದ ಒಂದೇ ಕುಟುಂಬದ ಎಂಟು ಮಂದಿ ತೀವ್ರವಾಗಿ ಅಸ್ವಸ್ಥರಾಗಿರುವ ಹೃದಯವಿದ್ರಾವಕ (Heartbreaking ) ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದೇವರೆಡ್ಡಿಪಲ್ಲಿ (Devareddipalli ) ಗ್ರಾಮದಲ್ಲಿ ನಡೆದಿದೆ.
ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮನೆಗೆ ಬಂದು ಸಾಂಬಾರ್‌ಗೆ ವಿಷ ಪ್ರಾಶನ ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ವಿಷ ಸೇವನೆಯಿಂದಾಗಿ ಮದ್ದರೆಡ್ಡಿಮ, ಬಾಗ್ಯಮ್ಮ, ಮಣಿ, ಸುಬ್ರಮಣಿ, ಈಶ್ವರಮ್ಮ, ಮದ್ದಕ್ಕ ಮತ್ತು ಮಂಜುನಾಥ್ ಸೇರಿದಂತೆ ಒಟ್ಟು 8 ಜನ (eight members) ಅಸ್ವಸ್ಥರಾಗಿದ್ದಾರೆ.
ಅಸ್ವಸ್ಥರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಎಲ್ಲರನ್ನೂ ಬಾಗೇಪಲ್ಲಿ ಹಾಗೂ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ತಕ್ಷಣ ಚಿಕ್ಕಬಳ್ಳಾಪುರ ಜಿಲ್ಲಾ ಎಸ್ಪಿ ಕುಶಲ್ ಚೌಕ್ಸೆ (District SP Kushal Choukse) ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.






