ಚಿಕ್ಕಮಗಳೂರು: ತೆರಿಗೆ ವಂಚನೆ (Tax Evasion) ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ (Income Tax)ಇಲಾಖೆ ಅಧಿಕಾರಿಗಳು ಚಿಕ್ಕಮಗಳೂರಿ(Chikkamagaluru) ನ ಪ್ರಮುಖ ಕೋಳಿ ರಫ್ತು ಕಂಪನಿಯಾದ ಲೈಫ್ ಲೈನ್ ಫೀಡ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (Life Line Feeds (India) Private Limited) ಮೇಲೆ ದಾಳಿ ನಡೆಸಿದ್ದಾರೆ.
ಕಂಪನಿಯ ಮಾಲೀಕ ಕಿಶೋರ್ ಕುಮಾರ್ ಹೆಗ್ಡೆ (Kishore Kumar Hegde) ಅವರ ನಿವಾಸ, ಕಛೇರಿ ಮತ್ತು ಫಾರಂ ಹೌಸ್‌ಗಳು ಸೇರಿದಂತೆ ಹಲವು ಸ್ಥಳಗಳ ಮೇಲೆ 12ಕ್ಕೂ ಹೆಚ್ಚು ವಾಹನಗಳಲ್ಲಿ ಆಗಮಿಸಿದ 40ಕ್ಕೂ ಅಧಿಕ ಐಟಿ ಸಿಬ್ಬಂದಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಈ ಕಾರ್ಯಾಚರಣೆ ನಡೆಸಲಾಗಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಈ ಲೈಫ್ ಲೈನ್ ಫೀಡ್ಸ್ (ಇಂಡಿಯಾ) ಪ್ರೈವೇಟ್ ಕಂಪನಿ ದೇಶ-ವಿದೇಶಗಳಿಗೆ ಕೋಳಿ ರಫ್ತು ಮಾಡುತ್ತಿದೆ.






