ಮೈಸೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ (Tiger) ದಾಳಿಯ ಪ್ರಕರಣಗಳನ್ನು ತಡೆಗಟ್ಟಲು ಅರಣ್ಯ ಇಲಾಖೆಯು ವಿಶಿಷ್ಟವಾದ ಕ್ರಮಕ್ಕೆ ಮುಂದಾಗಿದೆ. ಬಂಗಾಳದ ಸುಂದರಬನ್ ದ್ವೀಪ ಪ್ರದೇಶದಲ್ಲಿ ಯಶಸ್ವಿಯಾಗಿರುವ ಮಾದರಿಯಂತೆ, ಮನುಷ್ಯನ ಮುಖವನ್ನು ಹೋಲುವ ನೂತನ ಫೇಸ್ ಮಾಸ್ಕ್‌ಗಳನ್ನು ಮೈಸೂರಿ (Mysuru)ನ ರೈತರಿಗೆ ಮತ್ತು ಕಾಡಂಚಿನ ಗ್ರಾಮದ ಜನರಿಗೆ (Farmers and residents) ವಿತರಿಸಲು ನಿರ್ಧರಿಸಲಾಗಿದೆ.
ಸಾಮಾನ್ಯವಾಗಿ ಹುಲಿಗಳು ತಮ್ಮ ಬೇಟೆಯನ್ನು ಹಿಂಬದಿಯಿಂದ ಅಥವಾ ಕುತ್ತಿಗೆಯ ಭಾಗಕ್ಕೆ ದಾಳಿ ಮಾಡಿ ನಡೆಸುತ್ತವೆ. ರೈತರು ಕೆಲಸ ಮಾಡುವಾಗ ಈ ಮಾಸ್ಕ್‌ಗಳನ್ನು ತಲೆಯ ಹಿಂಭಾಗದಲ್ಲಿ ಕಟ್ಟಿಕೊಳ್ಳಬೇಕಾಗುತ್ತದೆ. ಇದರಿಂದ ಹುಲಿಗೆ ಮನುಷ್ಯ ತನ್ನನ್ನು ನೋಡುತ್ತಿದ್ದಾನೆ ಎಂಬ ಭ್ರಮೆ ಉಂಟಾಗಿ, ಹಿಂಬದಿ (Behind)ಯಿಂದ ದಾಳಿ ಮಾಡುವ ಸಾಧ್ಯತೆ ಕಡಿಮೆಯಾಗುತ್ತದೆ.
ಈ ಮುಖವಾಡದ ಗುರಾಣಿ (Face Mask Shield) ತಂತ್ರವು ಈಗಾಗಲೇ ಪಶ್ಚಿಮ ಬಂಗಾಳದ ಸುಂದರಬನ್ ದ್ವೀಪದಲ್ಲಿ (Sundarbans islands) ಹುಲಿ ದಾಳಿ ತಪ್ಪಿಸಲು ಯಶಸ್ವಿಯಾಗಿ ಬಳಕೆಯಲ್ಲಿದೆ.
ಅರಣ್ಯ ಇಲಾಖೆಯು ತಜ್ಞರ ಅಭಿಪ್ರಾಯ ಪಡೆದು, ಆರಂಭಿಕ ಹಂತದಲ್ಲಿ ಸುಮಾರು 10 ಸಾವಿರ ಜನರಿಗೆ (10,000 people) ಈ ಮಾಸ್ಕ್‌ಗಳನ್ನು ವಿತರಿಸಲು ಸಿದ್ಧತೆ ನಡೆಸಿದೆ. ಸಫಾರಿ ಸಿಬ್ಬಂದಿಗಳನ್ನು ಬಳಸಿ ಕಾಡಂಚಿನ ಗ್ರಾಮಗಳಲ್ಲಿ ಈ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಹಾಗೂ ಈ ವಿನೂತನ ಪ್ರಯೋಗವು ಮೈಸೂರಿನ ಕಾಡಂಚಿನ ಪ್ರದೇಶಗಳಲ್ಲಿ ಹುಲಿ-ಮಾನವ ಸಂಘರ್ಷವನ್ನು ತಗ್ಗಿಸುವ ನಿರೀಕ್ಷೆಯಿದೆ ಎಂದು ಅರಣ್ಯ ಇಲಾಖೆ (Forest Department) ತಿಳಿಸಿದೆ.






