ಬೆಳಗಾವಿ: ತಾಲೂಕಿನ ಭೂತರಾಮನಟ್ಟಿ (Bhootaramanatti) ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲ(Zoo)ಯದಲ್ಲಿ (Kittur Rani Chennamma Zoo) ಭಾರಿ ದುರಂತ ಸಂಭವಿಸಿದ್ದು, ಕೇವಲ ಮೂರು ದಿನಗಳ ಅಂತರದಲ್ಲಿ 28 ಕೃಷ್ಣಮೃಗಗಳು (Blackbuck) ಏಕಾಏಕಿ ಸಾವನ್ನಪ್ಪಿವೆ. ಇವು ಯಾವುದೋ ಮಾರಣಾಂತಿಕ ವೈರಸ್‌ಗೆ ಬಲಿಯಾಗಿರುವ ಬಗ್ಗೆ ವೈದ್ಯರು ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ.
ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಗಳಿದ್ದವು. ನವೆಂಬರ್ 13 ರಂದು 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇಂದು (ನವೆಂಬರ್ 15) ಮತ್ತೆ 20 ಕೃಷ್ಣಮೃಗಗಳು ಸೇರಿದಂತೆ ಒಟ್ಟು 28 ಕೃಷ್ಣಮೃಗಗಳು ಸಾವಿಗೀಡಾಗಿವೆ.
ನವೆಂಬರ್ 13 ರಂದು ಸಾವನ್ನಪ್ಪಿದ್ದ ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿ, ಸ್ಯಾಂಪಲ್‌ಗಳನ್ನು ಮೈಸೂರಿನ ಲ್ಯಾಬ್‌ಗೆ (lab in Mysuru) ರವಾನೆ ಮಾಡಲಾಗಿದೆ. ಈ ನಡುವೆ, ಏಕಾಏಕಿ ಸಾವು ಸಂಭವಿಸುತ್ತಿರುವುದರಿಂದ ಇದು ಮಾರಣಾಂತಿಕ ವೈರಸ್‌ನಿಂದ ಉಂಟಾಗಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಬೆಳಗಾವಿ ಎಸಿಎಫ್ ((Assistant Conservator of Forests) ) ನಾಗರಾಜ್ ಅವರು ಮೃಗಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವ ಕಾರಣ, ಮೈಸೂರಿನಿಂದ ವಿಶೇಷ ವೈದ್ಯರ ತಂಡವನ್ನೂ ಕರೆಸಲು ಅಧಿಕಾರಿಗಳು ಮುಂದಾಗಿದ್ದಾರೆ.






