ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ನೀಡಲಾಗಿದ್ದ ‘ರಾಜಾತಿಥ್ಯ’ದ ವಿಡಿಯೋ ಬಿಡುಗಡೆ ಸಂಬಂಧ ನಟ ದರ್ಶನ್ ಆಪ್ತ ಧನ್ವೀರ್ (Dhanyaveer ) ಅವರು ಇಂದು ಸಹ ಪೊಲೀಸ್ ವಿಚಾರಣೆಗೆ ಸಹಕರಿಸದೆ ನಾಟಕೀಯವಾಗಿ ತಪ್ಪಿಸಿಕೊಂಡಿದ್ದಾರೆ.
ವಿಚಾರಣೆಗೆ ಎಂದು ಪೊಲೀಸ್ ಠಾಣೆಗೆ ಬಂದಾಗ, ವಿಚಾರಣೆ ನಡೆಸಬೇಕಿದ್ದ ಇನ್ಸ್‌ಪೆಕ್ಟರ್ ಠಾಣೆಯಲ್ಲಿ ಇರಲಿಲ್ಲ. ಹೀಗಾಗಿ ಸಿಬ್ಬಂದಿಗಳು ಧನ್ವೀರ್‌ಗೆ ಊಟ ಮುಗಿಸಿ ಮತ್ತೆ ವಾಪಸ್ ಬರುವಂತೆ ಸೂಚಿಸಿದ್ದರು.
ಊಟಕ್ಕೆ ಹೋದ ಧನ್ವೀರ್, ನಿಗದಿತ ಸಮಯಕ್ಕೆ ವಾಪಸ್ ಬರದಿದ್ದಾಗ, ಪೊಲೀಸರು ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ ಪೋನ್ ಸ್ವಿಚ್ಡ್ ಆಫ್ (switched off) ಆಗಿದೆ. ಈ ಹಿನ್ನೆಲೆಯಲ್ಲಿ, ನಟ ಧನ್ವೀರ್ ಅವರಿಗೆ ಮತ್ತೊಂದು ನೋಟೀಸ್ (Another notice) ನೀಡಲು ಪೊಲೀಸರು ಮುಂದಾಗಿದ್ದಾರೆ.






