ಬೆಂಗಳೂರು: ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ADGP ದಯಾನಂದ್ (ADGP Dayananda) ಅವರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್‌ಬುಕ್ (Facebook) ಖಾತೆಯನ್ನು ತೆರೆದಿರುವ ಘಟನೆ ಬೆಳಕಿಗೆ ಬಂದಿದೆ.
ದಯಾನಂದ್ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿ, ಹಲವು ಮಂದಿಗೆ ಫ್ರೆಂಡ್ ರಿಕ್ವೆಸ್ಟ್‌ಗಳನ್ನು ಕಳುಹಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಈ ಹಿಂದೆ 3 ಬಾರಿ ನಕಲಿ ಅಕೌಂಟ್ (Fake Account) ಓಪನ್ ಮಾಡಿ ವಂಚಿಸಲು ಯತ್ನಿಸಿದ್ದ ಆರೋಪಿಗಳ ಕುರಿತು ಸೈಬರ್ ಪೊಲೀಸರ (Cyber Crime Police) ಗಮನಕ್ಕೆ ADGP ದಯಾನಂದ್ ಅವರು ತಂದಿದ್ದರು.
ಈಗ ನಕಲಿ ಎಫ್‌ಬಿ (FB)ಖಾತೆ ಪ್ರಕರಣ ಕೂಡ ಸೇರಿಕೊಂಡಿದ್ದು, ಸೈಬರ್ ಕ್ರೈಂ ವಿಭಾಗ ಆರೋಪಿಗಳನ್ನು ಪತ್ತೆಹಚ್ಚಲು ಮುಂದಾಗಿದೆ.






