Home State Politics National More
STATE NEWS

Koppal Gang Rape Case | ಆರೋಪಿಗಳನ್ನು ಬಂಧಿಸಿದ ಖಾಕಿ ಪಡೆ!

Rape case
Posted By: Meghana Gowda
Updated on: Nov 17, 2025 | 6:28 AM

ಕೊಪ್ಪಳ:  ಜಿಲ್ಲೆಯ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಸಾಮೂಹಿಕ ಅತ್ಯಾಚಾರ (Gang Rape) ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ರಾಮ್ ಎಲ್ ಅರಸಿದ್ದಿ (Dr. Ram L Arasiddi) ಅವರು ಸ್ಪಷ್ಟನೆ ನೀಡಿದ್ದು, ಕೂಡಲೇ ಕ್ರಮ ಕೈಗೊಂಡು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ: ದೂರು ನೀಡಿರುವ ಮಹಿಳೆಯು ಲಕ್ಷ್ಮಣ (Lakshmana) ಎಂಬ ವ್ಯಕ್ತಿಗೆ ₹5,000 ನೀಡಿದ್ದರು. ಆ ಹಣವನ್ನು ಹಿಂದಕ್ಕೆ ಪಡೆಯಲು ಆಕೆ ಕುಷ್ಟಗಿಗೆ ಬಂದಿದ್ದಳು. ಆರೋಪಿ ಲಕ್ಷ್ಮಣ, ಮಹಿಳೆಯನ್ನು ಕುಷ್ಟಗಿಯಿಂದ ಬೈಕ್ ಮೂಲಕ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಅಪರಾಧ ಎಸಗಿದ್ದಾನೆ. ಮಹಿಳೆಯು ದೂರಿನಲ್ಲಿ ಯಾವುದೋ ಜ್ಯೂಸ್ ಕುಡಿಸಿದ್ದರು ಎಂದು ಹೇಳಿದ್ದಾರೆ.

ಪ್ರಕರಣ ದಾಖಲಾದ ತಕ್ಷಣ ಯಲಬುರ್ಗಾಕ್ಕೆ ಭೇಟಿ ನೀಡಿದ್ದ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ಅವರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ತಕ್ಷಣದ ಕಾರ್ಯಾಚರಣೆಯಿಂದಾಗಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ರೋಣ ತಾಲೂಕಿನ ಸೂಡಿ ಗ್ರಾಮದ ಲಕ್ಷ್ಮಣ (Lakshmana) ಮತ್ತು ಬಸಬರಾಜ್ (Basavaraj), ಹಾಗೂ ಹನುಮಪುರು ಗ್ರಾಮದ ಭೀಮಪ್ಪ (Bhimappa)  ಮತ್ತು ಶಶಿಕುಮಾರ್ (Shashikumar) ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ (Government hospital) ದಾಖಲು ಮಾಡಿ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ ಎಂದು ಹೇಳಿದರು.

ಮಹಿಳೆ ಹೋಂ ಗಾರ್ಡ್ ಆಗಿದ್ದಳು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ನಮಗಿರುವ ಮಾಹಿತಿ ಪ್ರಕಾರ ಆಕೆ ಹೋಂ ಗಾರ್ಡ್ ಅಲ್ಲ. ಆದರೆ ಹೋಂ ಗಾರ್ಡ್ ಆಗಲು ತರಬೇತಿ ಪಡೆಯುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ಹೊಸಪೇಟೆ ಹೋಂ ಗಾರ್ಡ್ (Home Guard)  ಡಿವೈಎಸ್ಪಿಗೆ (DySP)ಮಾಹಿತಿ ಕೇಳಲಾಗಿದ್ದು, ತನಿಖೆ ನಂತರ ನಿಖರ ಮಾಹಿತಿ ತಿಳಿಯುತ್ತದೆ ಎಂದು ಹೇಳಿದರು.

Shorts Shorts