Home State Politics National More
STATE NEWS

RCB ಮಾಲೀಕತ್ವಕ್ಕೆ “ಹೊಂಬಾಳೆ ಫಿಲಂಸ್”ಎಂಟ್ರಿ!

RCB
Posted By: Meghana Gowda
Updated on: Nov 18, 2025 | 6:30 AM

ಬೆಂಗಳೂರು: ಕಾಂತಾರ’ (Kantara)ಮತ್ತು ‘ಕೆಜಿಎಫ್’ (KGF) ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ಮಿಸಿರುವ ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್  (Hombale Films) ಇವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಖರೀದಿ ಮಾಡಲು ಮುಂದಾಗಿದ್ದಾರೆ.

ಇದು ಸಿನಿಮಾ ಮತ್ತು ಕ್ರೀಡಾ ಲೋಕದ ನಡುವಿನ ಒಂದು ಮಹತ್ವದ ಸಂಪರ್ಕವಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಆರ್‌ಸಿಬಿ ಮಾಲೀಕತ್ವದ ಮಾರಾಟ ಪ್ರಕ್ರಿಯೆಯು ಮಾರ್ಚ್ 31, 2026 (March 31, 2026) ರೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದ್ದು, ಹೊಂಬಾಳೆ ಫಿಲಂಸ್, ಆರ್.ಸಿ.ಬಿ ತಂಡದ ಹೊಸ ಮಾಲೀಕತ್ವವನ್ನು ಪಡೆಯುವುದರಿಂದ, ತಂಡ ಮತ್ತು ಫ್ರಾಂಚೈಸಿಗಳಲ್ಲಿ ಮಹತ್ತರ ಬದಲಾವಣೆಗಳು ನಿರೀಕ್ಷಿಸಬಹುದು.

ಹಾಗೂ ಈ ಬೆಳವಣಿಗೆಯಿಂದಾಗಿ ಕ್ರೀಡಾ ಮತ್ತು ಮನರಂಜನಾ ಜಗತ್ತಿನಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಆರಂಭಗೊಂಡಿವೆ ಎಂದು ಹೇಳಿದರೆ ತಪ್ಪಾಗದು.

Shorts Shorts