Home State Politics National More
STATE NEWS

ಮಹಿಳಾ ಸುರಕ್ಷತೆಗಾಗಿ ಹೊಸ ನಿಯಮ: ಡ್ರೈವರ್ ಹಿಂಬದಿ ಸೀಟ್‌ಗಳಿಗೆ KSP, 112 QR ಕೋಡ್ ಸ್ಟಿಕ್ಕರ್!

583482944 18320692402172413 74873860411905818 n
Posted By: Meghana Gowda
Updated on: Nov 18, 2025 | 12:46 PM

ಬೆಂಗಳೂರು: ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು (safety of women)ಖಚಿತಪಡಿಸುವ ನಿಟ್ಟಿನಲ್ಲಿ ಪೊಲೀಸರು ಒಂದು ಮಹತ್ವದ ಹೊಸ ಹೆಜ್ಜೆ ಇಟ್ಟಿದ್ದಾರೆ. ಇಂದಿನಿಂದ ನಗರದ ಎಲ್ಲಾ ಕ್ಯಾಬ್‌ಗಳಿಗೆ (cabs)  ತುರ್ತು ಸಹಾಯವಾಣಿ ಮತ್ತು ಪೊಲೀಸ್ ಅಪ್ಲಿಕೇಶನ್‌ನ QR ಕೋಡ್ ಸ್ಟಿಕ್ಕರ್‌ಗಳನ್ನು (QR code stickers )  ಅಂಟಿಸುವುದನ್ನು ಕಡ್ಡಾಯಗೊಳಿಸಿದ್ದಾರೆ.

ನಗರದ ಸುಮಾರು 12 ಸಾವಿರ ಕ್ಯಾಬ್‌ಗಳಿಗೆ ಈ ಸ್ಟಿಕ್ಕರ್‌ಗಳನ್ನು ಅಂಟಿಸಲು ಸೂಚನೆ ನೀಡಲಾಗಿದೆ. ಈ ಸ್ಟಿಕ್ಕರ್‌ಗಳಲ್ಲಿ 112 ತುರ್ತು ಸಹಾಯವಾಣಿ (112 emergency helpline)  ಮತ್ತು KSP (ಕರ್ನಾಟಕ ರಾಜ್ಯ ಪೊಲೀಸ್) ಆ್ಯಪ್‌ನ QR ಕೋಡ್‌ಗಳು ಇರುತ್ತವೆ.

ಈ ಸ್ಟಿಕ್ಕರ್‌ಗಳನ್ನು ಚಾಲಕನ (driver) ಸೀಟ್‌ನ ಹಿಂಭಾಗದ ಎರಡು ಸೀಟ್‌ಗಳಿಗೂ ಅಂಟಿಸಲು ಸೂಚಿಸಲಾಗಿದ್ದು, ಪ್ರಯಾಣಿಕರು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಈ QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ತಕ್ಷಣ, ಅವರಿಗೆ 112 ಹಾಗೂ KSP ಆ್ಯಪ್‌ನ ವಿವರ ಮತ್ತು ಪೊಲೀಸರನ್ನು ಸಂಪರ್ಕಿಸುವ ಮಾಹಿತಿ ಲಭ್ಯವಾಗುತ್ತದೆ.

ಪೊಲೀಸ್ ಇಲಾಖೆಯೇ ಈ ಸ್ಟಿಕ್ಕರ್‌ಗಳನ್ನು ಕ್ಯಾಬ್‌ಗಳಿಗೆ ಉಚಿತವಾಗಿ ವಿತರಿಸುತ್ತಿದೆ. ಈ ಹೊಸ ಕ್ರಮದಿಂದ ಮಹಿಳೆಯರು ಮತ್ತು ಪ್ರಯಾಣಿಕರು ತುರ್ತು (Emergency) ಸಂದರ್ಭದಲ್ಲಿ ಪೊಲೀಸರ ಸಹಾಯವನ್ನು ತಕ್ಷಣ ಪಡೆಯಲು ಅನುಕೂಲವಾಗುತ್ತದೆ.

Shorts Shorts