ಬೆಳಗಾವಿ: ಬೆಳಗಾವಿಯ(Belagavi) ಅಮನ್ ನಗರದಲ್ಲಿ ಮನೆಯೊಳಗೆ ಹೊಗೆಯಿಂದ ಉಸಿರುಗಟ್ಟಿ ಮೂವರು ಯುವಕರು ದುರ್ಮರಣಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ (post-mortem) ಮುಕ್ತಾಯವಾಗಿದೆ.
ಅಮನ್ ನಗರದ (Aman Nagar) ನಿವಾಸಿಗಳಾದ ರಿಹಾನ್ ಮತ್ತೆ(22), ಮೋಹಿನ್ ನಾಲಬಂದ್(23), ಸರ್ಫರಾಜ್ ಹರಪನಹಳ್ಳಿ(22) ಸಾವನ್ನಪ್ಪಿದ್ದರೆ ಮತ್ತೋಬ್ಬ ಯುವಕ ಶಾಹನವಾಜ್(19) ಸ್ಥಿತಿ ಗಂಭೀರವಾಗಿದ್ದು(critical condition ), ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ
ಘಟನೆ ವಿವರ: ಅಮನ್ ನಗರದಲ್ಲಿರುವ ಮನೆಯೊಂದರಲ್ಲಿ ನಾಲ್ವರು ಯುವಕರು ಬುಟ್ಟಿಯೊಂದರಲ್ಲಿ ಬೆಂಕಿ ಹಾಕಿ ಹೊಗೆ ಹಾಕಿಕೊಂಡು ಮಲಗಿದ್ದರು. ಮನೆಯಲ್ಲಿ ಕಿಟಕಿಗಳಿಲ್ಲದೆ ಸರಿಯಾದ ಗಾಳಿಯಾಡದೆ (ವೆಂಟಿಲೇಶನ್ ಆಗದೆ), ಹೊಗೆಯಿಂದಾಗಿ ಉಸಿರುಗಟ್ಟಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ (BIMS Hospital) ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ, ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






