Home State Politics National More
STATE NEWS

Seabird ಕಾಲೋನಿಯಲ್ಲಿ ಹಾಡುಹಗಲೇ ಬೈಕ್ ಕಳ್ಳತನ: CC Camera ದಲ್ಲಿ ದೃಶ್ಯ ಸೆರೆ!

Bike theft in daylight at karwar
Posted By: Sagaradventure
Updated on: Nov 19, 2025 | 8:29 AM

ಕಾರವಾರ: ಹಾಡಹಗಲೇ ಬೈಕ್ ಕಳ್ಳತನ ನಡೆಸಿಕೊಂಡು ಹೋಗಿರುವ ಘಟನೆ ತಾಲ್ಲೂಕಿನ ಮುದಗಾ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಈ ಘಟನೆ ನಡೆದಿದ್ದು, ಸಿಸಿಕ್ಯಾಮೆರಾದಲ್ಲಿ ಬೈಕ್ ಕದ್ದುಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಸೆರೆಯಾಗಿವೆ.

ಮುದಗಾದ ಸೀಬರ್ಡ್ ಕಾಲೋನಿಯ ನಿವಾಸಿ ಸತೀಶ.ಕೆ.ದುರ್ಗೇಕರ್ ಅವರ ಮನೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಬೈಕ್‌ನ್ನು ಕಳ್ಳ ನಾಜೂಕಾಗಿ ಎಗರಿಸಿಕೊಂಡು ಪರಾರಿಯಾಗಿದ್ದ. ಈ ವೇಳೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಹಟ್ಟಿಕೇರಿಯ ಟೋಲ್‌ಗೇಟ್ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪರಿಶೀಲನೆ ವೇಳೆ ಕಳ್ಳತನ ನಡೆಸಿದ ಆರೋಪಿಯ ಮುಖ ದೃಶ್ಯಗಳಲ್ಲಿ‌ ಸ್ಪಷ್ಟವಾಗಿದೆ.

ಸದ್ಯ ಬೈಕ್ ಕಳ್ಳತನ ನಡೆಸಿದ ಆರೋಪಿತನ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಳ್ಳತನ ಗುರುತು ಪತ್ತೆಯಾದಲ್ಲಿ ಅಂತಹವರು ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

Shorts Shorts