ಬೆಂಗಳೂರು: ನಗರದ ಆವಲಹಳ್ಳಿ ಪೊಲೀಸರ (Avalahalli Police) ಲಿಮಿಟ್ಸ್‌ನಲ್ಲಿ ಐಷಾರಾಮಿ ಮನೆ ಮತ್ತು ವಿಲ್ಲಾಗಳನ್ನೇ (luxury homes and villas) ಗುರಿಯಾಗಿಸಿಕೊಂಡಿದ್ದ ದರೋಡೆಕೋರರ ಗ್ಯಾಂಗ್‌ನೊಂದು ರಾತ್ರಿಯಿಡೀ ಕಾದಿದ್ದು, ನಾಯಿ ಬೊಗಳಿದ ಕಾರಣ ಕೃತ್ಯ ನಡೆಸಲಾಗದೆ ಪರಾರಿಯಾಗಿದೆ. ಕಳ್ಳರ ಈ ಬೆಚ್ಚಿಬೀಳಿಸುವ ಕೃತ್ಯದ ಸಿಸಿಟಿವಿ ದೃಶ್ಯಗಳು (Exclusive CCTV footage) ಲಭ್ಯವಾಗಿವೆ.
ಆವಲಹಳ್ಳಿಯ ಬೆಂಡಿಗಾನಹಳ್ಳಿ ಏರಿಯಾದಲ್ಲಿ ಐಷಾರಾಮಿ ಮನೆ ಹಾಗೂ ವಿಲ್ಲಾಗಳನ್ನು ಟಾರ್ಗೆಟ್ ಮಾಡಿದ ಗ್ಯಾಂಗ್, ಒಂದು ಗಂಟೆ ಅಂತರದಲ್ಲಿ ಎರಡು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದೆ. ಮಧ್ಯರಾತ್ರಿ ಕಂಪೌಂಡ್ ಹಾರಿ ಒಳ ಬಂದ ಕಳ್ಳರು, ಮನೆ ಮಾಲೀಕರು ನಿದ್ರೆ ಮಾಡುತ್ತಿರುವುದನ್ನು ಕನ್ಫರ್ಮ್ ಆದ ನಂತರ ಡ್ಯೂಟಿ ಶುರು ಮಾಡಿದ್ದಾರೆ.
ಮುಖಕ್ಕೆ ಮಂಕಿ ಕ್ಯಾಪ್ (monkey caps) ಧರಿಸಿದ ಆರೋಪಿಗಳು, ಒಂದು ಕೈಯಲ್ಲಿ ಬೆಲ್ಲ ( jaggery) ಮತ್ತು ಇನ್ನೊಂದು ಕೈಯಲ್ಲಿ ಐರನ್ ಕಟರ್ (iron cutter) ಹಿಡಿದು ಎಂಟ್ರಿ ನೀಡಿದ್ದಾರೆ. ಮನೆಯ ಕಿಟಕಿ, ಬಾಗಿಲುಗಳನ್ನು ಐರನ್ ಕಟರ್‌ನಿಂದ ಕಟ್ ಮಾಡಿ ಒಳಹೋಗಲು ಪ್ರಯತ್ನಿಸಲು ಯತ್ನಿಸಿದಾಗ, ನಾಯಿ ಬೊಗಳಿದ್ದರಿಂದ ಮನೆ ಮಾಲೀಕರು ಎಚ್ಚರಗೊಂಡಿದ್ದಾರೆ. ಇದರಿಂದ ಗಾಬರಿಗೊಂಡ ದರೋಡೆ ಗ್ಯಾಂಗ್ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ರಾತ್ರಿ ಪೂರ್ತಿ ಕಾದು ಕುಳಿತು, ಬೆಳಗ್ಗಿನ ಜಾವ ಕೃತ್ಯಕ್ಕೆ ಇಳಿದಿದ್ದಾರೆ. ಒಂದು ವೇಳೆ ನಾಯಿ ಬೊಗಳಿದರೆ, ನಾಯಿಗೆ ಬೆಲ್ಲ ಹಾಕಿ ಸಮಾಧಾನಪಡಿಸಲು ಅವರು ಬೆಲ್ಲ ತಂದಿದ್ದರು. ಕೃತ್ಯಕ್ಕೂ ಕೆಲ ಗಂಟೆಗಳ ಮುನ್ನ ಕೂಗಳತೆ ದೂರದ ನಿರ್ಜನ ಪ್ರದೇಶದಲ್ಲಿ ಗ್ಯಾಂಗ್ ಎಣ್ಣೆ ಪಾರ್ಟಿ (alcohol party) ಮಾಡಿರುವುದು ಸಿಸಿಟಿವಿ ದೃಶ್ಯದಲ್ಲಿ ಪತ್ತೆಯಾಗಿದೆ.
ಆವಲಹಳ್ಳಿ ಪೊಲೀಸರು ಸಿಸಿಟಿವಿ ಆಧರಿಸಿ ದರೋಡೆ ಗ್ಯಾಂಗ್‌ಗೆ ಬಲೆ ಬೀಸಿದ್ದು, ಎರಡು ರಾತ್ರಿಗಳಲ್ಲಿ ಮೂರು ಕಡೆ ಕಳ್ಳತನಕ್ಕೆ ಯತ್ನಿಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.






