ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್ (Mantri Mall) ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೋಟ್ಯಂತರ ರೂಪಾಯಿಗಳ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅಧಿಕಾರಿಗಳು ಮಾಲ್‌ಗೆ ಬೀಗ ಜಡಿದು ಸೀಜ್ (Sealed) ಮಾಡಿದ್ದಾರೆ.
ಅಭಿಷೇಕ್ ಡೆವಲಪರ್ಸ್‌ಗೆ (Abhishek Developers ) ಸೇರಿರುವ ಈ ಮಾಲ್, ₹30 ಕೋಟಿಗೂ (₹30 crores) ಅಧಿಕ (ನಿಖರವಾಗಿ ₹30,81,45,600) ಆಸ್ತಿ ತೆರಿಗೆಯನ್ನು GBAಗೆ ಪಾವತಿಸಬೇಕಿದೆ.
ಹಲವು ಬಾರಿ ನೋಟಿಸ್ ನೀಡಿದರೂ ಮಾಲ್ ಮಾಲೀಕರು ತೆರಿಗೆ ಪಾವತಿಗೆ ಕ್ಯಾರೆ ಎನ್ನದೆ ಕಳ್ಳಾಟವಾಡಿದ್ದಾರೆ. ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಕೋರ್ಟ್ ಮೊರೆ ಹೋಗಿದ್ದರು.
GBA ಅಧಿಕಾರಿಗಳು ಇಂದು ಬೆಳಿಗ್ಗೆ ಮಾಲ್‌ಗೆ ಆಗಮಿಸಿ, ಬೀಗ ಜಡಿದು ಸೀಜ್ ಮಾಡುವ ಪ್ರಕ್ರಿಯೆ ನಡೆಸಿದ್ದು, ಮಾಲ್ ಸೀಜ್ ಆದ ಹಿನ್ನೆಲೆಯಲ್ಲಿ ನೂರಾರು ಸಿಬ್ಬಂದಿ ಮಾಲ್ ಮುಂದೆ ಕಾಯುತ್ತಿದ್ದು, ದಿಢೀರ್ ಬೀಗ ಹಾಕಿದ್ದರಿಂದ ನೌಕರರು ಕಂಗಾಲಾಗಿದ್ದಾರೆ.






