Home State Politics National More
STATE NEWS

Parappana Agrahara ರಾಜಾತಿಥ್ಯ: ವಿಚಾರಣೆ ವೇಳೆ ವಿಜಯಲಕ್ಷ್ಮೀ ಹೆಸರು ಬಯಲು!

Darshan viji
Posted By: Meghana Gowda
Updated on: Nov 19, 2025 | 5:22 AM

ಬೆಂಗಳೂರು: ಬೆಂಗಳೂರಿನ ಜೈಲಿನಲ್ಲಿ ಕೈದಿಗಳಿಗೆ ನೀಡಿದ ರಾಜಾತಿಥ್ಯದ (VIP treatment) ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಈ ವಿಚಾರದಲ್ಲಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ (Vijayalakshmi’) ಅವರ ಹೆಸರು ಬಹಿರಂಗವಾಗಿದೆ.

ಎರಡನೇ ನೋಟಿಸ್ ಸಂದರ್ಭದಲ್ಲಿ ವಿಚಾರಣೆ ಎದುರಿಸಿದ  ಧನ್ನೀರ್ (Dhannir) , ವಿಡಿಯೋ ನನಗೆ ವಕೀಲರಿಂದ (lawyer) ಬಂದಿದ್ದು, ನಾನು ಅದನ್ನು ವಿಜಯಲಕ್ಷ್ಮೀಯವರಿಗೆ ಕಳಿಸಿದ್ದೆ. ಹಾಗೂ ನಾನು ವಿಡಿಯೋ ವೈರಲ್ ಮಾಡಿಲ್ಲ, ಅದ್ಯಾಕೆ ವೈರಲ್ ಆಯಿತೋ ಗೊತ್ತಿಲ್ಲ ಎಂದು  ತಿಳಿಸಿದ್ದಾರೆ.

ಧನ್ನೀರ್ ನೀಡಿದ ಹೇಳಿಕೆಯಲ್ಲಿ ವಿಜಯಲಕ್ಷ್ಮೀ ಅವರ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ, ತನಿಖಾಧಿಕಾರಿಗಳು ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹಾಗೂ ವಿಜಯಲಕ್ಷ್ಮೀ ಅವರನ್ನೇ ವಿಚಾರಣೆಗೆ ಕರೆಯುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ಜೈಲಿನ ರಾಜಾತಿಥ್ಯದ ವಿಡಿಯೋ ವೈರಲ್ (viral video) ಪ್ರಕರಣದಲ್ಲಿ ವಿಜಯಲಕ್ಷ್ಮೀಯವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ವಿಡಿಯೋ ಮೂಲ ಮತ್ತು ತನಿಖೆ: ವಿಡಿಯೋ ಅಪ್‌ಲೋಡ್ ಮಾಡಿದ ಖಾತೆಗಳ ಪತ್ತೆಗಾಗಿ ಪೊಲೀಸರು META (Facebook/Instagram) ಸಂಸ್ಥೆಗೆ ಈಗಾಗಲೇ ಪತ್ರ ಬರೆದಿದ್ದಾರೆ. ರಾಜಾತಿಥ್ಯದ ವಿಡಿಯೋ ಲಿಂಕ್ ಅನ್ನು ಲಗತ್ತಿಸಿ, ಎಷ್ಟು ಖಾತೆಗಳಿಂದ ಪೋಸ್ಟ್ ಆಗಿದೆ ಎಂಬ ಮಾಹಿತಿ ಕೋರಲಾಗಿದೆ.

ಈ ವಿಡಿಯೋ ಚಿತ್ರೀಕರಿಸಿದ ಆರೋಪ ಎದುರಿಸುತ್ತಿರುವ ಕೈದಿಯನ್ನು ವಿಚಾರಣೆ ಮಾಡಿದಾಗ, “ವಿಡಿಯೋ ಚಿತ್ರೀಕರಿಸಿದ್ದ ಮೊಬೈಲ್ ನನ್ನ ಬಳಿ ಇಲ್ಲ. 2023 ರಲ್ಲಿ ಪೊಲೀಸರು ಜೈಲಿನ ಮೇಲೆ ದಾಳಿ ಮಾಡಿದಾಗ ಆ ಮೊಬೈಲ್ ಸೀಜ್ (seized) ಮಾಡಿಕೊಂಡಿದ್ದರು. ಆದರೂ ವಿಡಿಯೋ ಹೇಗೆ ವೈರಲ್ ಆಯಿತು ಎಂಬುದು ಗೊತ್ತಿಲ್ಲ” ಎಂದು ಹೇಳಿಕೆ ನೀಡಿದ್ದಾನೆ.

Shorts Shorts