ಮಂಡ್ಯ: ಶಬರಿಮಲೆ ಯಾತ್ರೆಗೆ ತೆರಳಿದ್ದ ಮಂಡ್ಯ (Mandya) ಜಿಲ್ಲೆಯ ಮಾಲಾಧಾರಿಗಳ ಬಸ್ ಕೇರಳದ (Kerala) ಏರಿಮಲೆ (Erumeli) ಬಳಿ ನಿನ್ನೆ (ಮಂಗಳವಾರ) ಅಪಘಾತಕ್ಕೀಡಾಗಿದ್ದು, ಅಲ್ಲಿನ ಸ್ಥಳೀಯ ಆಡಳಿತದಿಂದ ಸೂಕ್ತ ನೆರವು ಸಿಗದೆ 33 ಭಕ್ತರು ರಸ್ತೆ ಮಧ್ಯೆಯೇ ಪರದಾಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಿಂದ (K.R. Pete in Mandya district) ಶಬರಿಮಲೆಗೆ ತೆರಳಿದ್ದ ಒಟ್ಟು 33 ಭಕ್ತರಿದ್ದ (33 devotees ) ಬಸ್ (Bus) ಏರಿಮಲೆ ಬಳಿ ಅಪಘಾತಕ್ಕೀಡಾಗಿದೆ. ಅಪಘಾತವಾದ ನಂತರ ಸ್ಥಳೀಯ ಆಡಳಿತವು ಭಕ್ತರಿಗೆ ಕೇವಲ ಪ್ರಥಮ ಚಿಕಿತ್ಸೆ ಮಾತ್ರ ನೀಡಿದೆ. ಚಿಕಿತ್ಸೆ ಬಳಿಕ ಅಧಿಕಾರಿಗಳು ಭಕ್ತರನ್ನು ಕ್ಯಾರೆ ಎಂದಿಲ್ಲ ಎಂದು ಆರೋಪಿಸಲಾಗಿದೆ.
ಅಪಘಾತಕ್ಕೀಡಾದ ಕರ್ನಾಟಕದ ಭಕ್ತರಿಗೆ ಪರ್ಯಾಯವಾಗಿ ಶಬರಿಮಲೆಗೆ (Sabarimala) ತೆರಳಲು ಬಸ್ ವ್ಯವಸ್ಥೆ ಕಲ್ಪಿಸದ ಕಾರಣ, ಅವರು ರಸ್ತೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಭಕ್ತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.






