ಬೆಂಗಳೂರು: ಲೈಂಗಿಕ ಕಿರುಕುಳ (sexual harassment)ಪ್ರಕರಣದ ಆರೋಪಿಯಾಗಿದ್ದ ವಿಶ್ರಾಂತ ಕುಲಸಚಿವ ಮೈಲಾರಪ್ಪ (Former Registrar Mylarappa) ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು (Kamakshipalya police) ಮತ್ತೆ ಬಂಧಿಸಿದ್ದಾರೆ. ಜಾಮೀನು ಪಡೆದ ನಂತರ ನ್ಯಾಯಾಲಯದ ವಿಚಾರಣೆಗೆ ಗೈರಾದ ಕಾರಣ ಅವರನ್ನು ಬಂಧಿಸಲಾಗಿದೆ.
ಈ ಹಿಂದೆ ಜಾಮೀನು ಪಡೆದಿದ್ದ ಮೈಲಾರಪ್ಪ ಅವರು ವಿಚಾರಣೆಗೆ ACJM ಕೋರ್ಟ್‌ಗೆ ಹಾಜರಾಗಿರಲಿಲ್ಲ. ನ್ಯಾಯಾಲಯಕ್ಕೆ ಗೈರಾದ ಹಿನ್ನೆಲೆಯಲ್ಲಿ, ಎಸಿಜೆಎಂ ಕೋರ್ಟ್ (ACJM Court)ನಿಂದ ಅವರ ವಿರುದ್ಧ ವಾರೆಂಟ್ (warrant) ಜಾರಿ ಆಗಿತ್ತು. ಇದರ ಜೊತೆಗೆ, ಸೆಷನ್ಸ್ ಕೋರ್ಟ್‌ನಲ್ಲಿ ಪಡೆದಿದ್ದ ಅವರ ಜಾಮೀನು ಸಹ ರದ್ದುಗೊಂಡಿತ್ತು.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ, ಕಾಮಾಕ್ಷಿಪಾಳ್ಯ ಪೊಲೀಸರು ಇಂದು ಬೆಳಿಗ್ಗೆ ಮೈಲಾರಪ್ಪ ಅವರನ್ನು ಮತ್ತೆ ಬಂಧಿಸಿದ್ದಾರೆ.






