Home State Politics National More
STATE NEWS

ಕೊತ್ತಲವಾಡಿ ಸಿನಿಮಾ ಪ್ರಚಾರದಲ್ಲಿ ₹64 ಲಕ್ಷ ವಂಚನೆ- ಯಶ್ ತಾಯಿ ಪುಷ್ಪಾ ದೂರು!

BeFunky collage (5)
Posted By: Meghana Gowda
Updated on: Nov 19, 2025 | 7:14 AM

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ತಾಯಿ ಹಾಗೂ ‘ಕೊತ್ತಲವಾಡಿ’ (Kothalavadi)  ಸಿನಿಮಾದ ನಿರ್ಮಾಪಕಿ ಪುಷ್ಪ (Pushpa)  ಅವರು, ಚಿತ್ರದ ಪ್ರಚಾರದ ಹೆಸರಿನಲ್ಲಿ ವಂಚನೆ ಹಾಗೂ ಡಿ-ಪ್ರಮೋಟ್ ಆರೋಪದ ಮೇಲೆ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಿಆರ್‌ಒ (Public Relations Officer) ಹರೀಶ್ ಅರಸು ಸೇರಿದಂತೆ ಐವರು ‘ಕೊತ್ತಲವಾಡಿ’ ಚಿತ್ರವನ್ನು ಪ್ರಚಾರ ಮಾಡಲು ಒಟ್ಟು ₹64 ಲಕ್ಷ ರೂಪಾಯಿ (₹64 lakh ) ಪಡೆದಿದ್ದರು. ಹಣ ಪಡೆದ ನಂತರ ಅವರು ಚಿತ್ರದ ಪ್ರಚಾರ ಮಾಡಿಲ್ಲ. ಬದಲಿಗೆ, ಚಿತ್ರವನ್ನು ಡಿ-ಪ್ರಮೋಟ್ (de-promotionಮಾಡಿದ್ದಾರೆ ಎಂದು ಯಶ್ ತಾಯಿ ಆರೋಪಿಸಿದ್ದಾರೆ.

ಹರೀಶ್ ಅರಸು ಹೆಚ್ಚಿನ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಮನೆ ಬಳಿ ಬಂದು ಗಲಾಟೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಪಿಆರ್‌ಒ ಹರೀಶ್ ಅರಸು( Harish Arasu), ಮನು, ನಿತಿನ್, ಮಹೇಶ್ ಗುರು ಮತ್ತು ಸ್ವರ್ಣ ಲತಾ ಎಂಬುವವರ ವಿರುದ್ಧ  ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Shorts Shorts