ಬೆಂಗಳೂರು: ನಗರದಲ್ಲಿ ನಡೆದ ₹7.11 ಕೋಟಿ CMS ವಾಹನ ದರೋಡೆ ಪ್ರಕರಣವು ‘ದಿ ಗ್ರೇಟ್ ರಾಬರಿ’ (Great Robbery) ಪಟ್ಟಿಗೆ ಸೇರುವ ಸಾಧ್ಯತೆಗಳಿದ್ದು, ಖದೀಮರು ಪೊಲೀಸರನ್ನು ಗೊಂದಲದಲ್ಲಿ ಸಿಲುಕಿಸಲು ಪೂರ್ವ ನಿಯೋಜಿತವಾಗಿ ‘ವೆಬ್ ಸೀರೀಸ್’ (web series) ಶೈಲಿಯ ತಂತ್ರಗಳನ್ನು ಬಳಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ದರೋಡೆಕೋರರ ಈ ಕೃತ್ಯದಲ್ಲಿನ ಸೂಕ್ಷ್ಮ ಪ್ಲಾನಿಂಗ್ ಪೊಲೀಸರಿಗೂ ಅಚ್ಚರಿ ತಂದಿದೆ.
ದರೋಡೆಗೆ ಬಳಸಿದ CMS ವಾಹನ ಸಿಕ್ಕಿದ್ದ ಸ್ಥಳದ ಆಯ್ಕೆ ಪೊಲೀಸರಿಗೆ ಅನುಮಾನಕ್ಕೆ ಕಾರಣವಾಗಿದೆ.
ವಾಹನವು ನಿಮ್ಹಾನ್ಸ್ ಬಳಿಯ ಮೇಲ್ಭಾಗದಲ್ಲಿ, ನಿಖರವಾಗಿ ಮೂರು ಪ್ರಮುಖ ಪೊಲೀಸ್ ಠಾಣೆಗಳ ಸರಹದ್ದು (ಬಾರ್ಡರ್) ಸೇರುವ ಸ್ಥಳದಲ್ಲಿ ಪತ್ತೆಯಾಗಿದೆ. ವಾಹನದ ಸನಿಹ ಆಡುಗೋಡಿ ಪೊಲೀಸ್ ಠಾಣೆ ( Adugodi Police Station)ಸರಹದ್ದು. ವಾಹನದ ಎಡಬದಿಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆ ಸರಹದ್ದು (ಇಲ್ಲಿ ಕೃತ್ಯ ನಡೆದಿದೆ). ಹಾಗೂ ಪತ್ತೆಯಾದ ಸ್ಥಳದ ಅನತಿ ದೂರದಲ್ಲಿ ಸದ್ಗುಂಟೆ ಪಾಳ್ಯ ಪೊಲೀಸ್ ಠಾಣೆ ಸರಹದ್ದು ಇದೆ.
ಕೃತ್ಯ ನಡೆದಿದ್ದು ಸಿದ್ದಾಪುರ ಲಿಮಿಟ್ಸ್ನಲ್ಲಿ (Siddapura limits) (ದಕ್ಷಿಣ ವಿಭಾಗ), ಆದರೆ ವಾಹನ ಸಿಕ್ಕಿದ್ದು ಇಂಚಿನ ವ್ಯತ್ಯಾಸದಲ್ಲಿ ಸದ್ಗುಂಟೆಪಾಳ್ಯ ವ್ಯಾಪ್ತಿಗೆ (ಸೌತ್ ಈಸ್ಟ್ ವಿಭಾಗ). ಇದರಿಂದ ಮೊದಲು ಯಾವ ಠಾಣೆ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬ ಗೊಂದಲ ಕೆಲಕಾಲ ಮೂಡಿತ್ತು.
ಸರಹದ್ದಿನ ಆಧಾರದ ಮೇಲೆ ಕೆಲಸ ಮಾಡುವ ಪೊಲೀಸರ ಈ ಗೊಂದಲವೇ ರಾಬರ್ಸ್ಗಳಿಗೆ ಗ್ರೇಟ್ ಎಸ್ಕೇಪ್ (Great Escape) ಆಗಲು ವರವಾಯಿತಾ ಎಂಬ ಪ್ರಶ್ನೆ ಎದ್ದಿದೆ.
ವೆಬ್ ಸೀರೀಸ್ನ ಮೆಥಡ್: ಅನೇಕ ಜೈಲ್ ಬ್ರೇಕ್ ಸೀರೀಸ್ಗಳು, ರಾಬರಿ ಸೀರೀಸ್ಗಳಲ್ಲಿ ಪೊಲೀಸರನ್ನು ಕನ್ಫ್ಯೂಷನ್ನಲ್ಲಿ ಸಿಲುಕಿಸಿ ಪರಾರಿಯಾಗಲು ಇದೇ ರೀತಿಯ ತಂತ್ರವನ್ನು ಅಳವಡಿಸಲಾಗುತ್ತದೆ. ದರೋಡೆಕೋರರು ಇಂತಹ ಯಾವುದಾದರೂ ವೆಬ್ ಸೀರೀಸ್ನಿಂದ ಪ್ರೇರಣೆ ಪಡೆದು, ಈ ‘ಬಾರ್ಡರ್’ ಪ್ಲಾನ್ ಅನ್ನು ಎಕ್ಸಿಕ್ಯೂಟ್ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಪೊಲೀಸರು ’24 ಗಂಟೆಗಳ ಗೋಲ್ಡನ್ ಹವರ್’ ಅನ್ನು ಬಳಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.






