ಬೆಂಗಳೂರು: ನಗರದಲ್ಲಿ ಬಿಎಂಟಿಸಿ (BMTC) ಬಸ್‌ನಿಂದ ಸಂಭವಿಸುವ ಅಪಘಾತಗಳ (Accidents)ಸರಣಿ ಮುಂದುವರಿದಿದ್ದು, ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 65 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.
ಅಪಘಾತವು ಮಡಿವಾಳ ಪೊಲೀಸ್ ಠಾಣೆಯ (Madiwala Police Station) ಮುಂಭಾಗವೇ ಇಂದು ನಡೆದಿದ್ದು, ಮೃತ ವ್ಯಕ್ತಿಯನ್ನು ವೆಂಕಟರಾಮಯ್ಯ (65) (Venkatramaiah) ಎಂದು ಗುರುತಿಸಲಾಗಿದೆ
ಬಿಎಂಟಿಸಿ ಬಸ್ ವೆಂಕಟರಾಮಯ್ಯ ಅವರಿಗೆ ಗುದ್ದಿದ್ದು, ಡಿಕ್ಕಿಯಾದ ರಭಸಕ್ಕೆ ಬಿದ್ದ ವ್ಯಕ್ತಿಯ ತಲೆಯ ಮೇಲೆ ಟೈಯರ್ (tire)ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






