ಬೆಂಗಳೂರು: ನಗರದಲ್ಲಿ ₹7 ಕೋಟಿ (₹7 crore) ದರೋಡೆ ಮಾಡಿ ಪರಾರಿಯಾಗಿರುವ ಖದೀಮರ ಪತ್ತೆಗಾಗಿ ಪೊಲೀಸರು (police) ನಾಲ್ಕು ವಿಶೇಷ ತಂಡಗಳನ್ನು ರಚಿಸಿ, ರಾಜ್ಯದ ಗಡಿಭಾಗಗಳು ಹಾಗೂ ನೆರೆಯ ರಾಜ್ಯಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ. ಹಾಗೂ ಈ ಬೃಹತ್ ರಾಬರಿಯ ಸಂಚು ಪರಪ್ಪನ ಅಗ್ರಹಾರ ಜೈಲಿನಿಂದಲೇ (Parappana Agrahara Jail) ರೂಪಿಸಿರುವ ಬಗ್ಗೆ ಅನುಮಾನ ಕೂಡ ವ್ಯಕ್ತವಾಗಿದ್ದು, ಇನ್‌ಸ್ಪೆಕ್ಟರ್ ನೇತೃತ್ವದ ಪೊಲೀಸ್ ತಂಡವು ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ಪರಿಶೀಲನೆ ನಡೆಸಿದೆ.
ದರೋಡೆಕೋರರು ಕುಪ್ಪಂಗೆ (Andhra Pradesh) ಹೋಗಿದ್ದಾರೆಯೇ ಅಥವಾ ಹೊಸೂರು (Tamil Nadu) ಕಡೆಗೆ ಎಸ್ಕೇಪ್ ಆಗಿರಬಹುದು. ಮತ್ತು ಆಂಧ್ರಪ್ರದೇಶದ ಭಾಗಗಳಿಗೆ ಹೋಗಿರಬಹುದು ಎಂದು 50ಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸಿಸಿಬಿ OCW ತಂಡ ತಮಿಳುನಾಡಿನ ಗಡಿಭಾಗಗಳಲ್ಲಿ ಶೋಧ ನಡೆಸುತ್ತಿದೆ. ದಕ್ಷಿಣ ವಿಭಾಗದ ಪೊಲೀಸರು ಆಂಧ್ರಪ್ರದೇಶದಲ್ಲಿ ತಲಾಶ್ ನಡೆಸುತ್ತಿದ್ದಾರೆ. ಡಿಸಿಪಿ ಲೋಕೇಶ್‌ರ ತಂಡ ಸಿಎಂಎಸ್ ಸಂಸ್ಥೆಯ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದೆ. ಹಾಗೂ ಸಿಸಿಬಿ ಸ್ಪೆಷಲ್ ಎನ್‌ರಿ ಟೀಂ ತಾಂತ್ರಿಕ (ಟೆಕ್ನಿಕಲ್), ಸಿಡಿಆರ್ (ಕಾಲ್ ಡಿಟೇಲ್ಸ್ ರೆಕಾರ್ಡ್) ಸಾಕ್ಷ್ಯಗಳನ್ನು ಮತ್ತು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಕರ್ನಾಟಕದ ಗಡಿ ಭಾಗಗಳಲ್ಲೂ ಶೋಧ ನಡೆಸುತ್ತಿದೆ.
ಗ್ಯಾಂಗ್ ಎರಡು ತಂಡಗಳಾಗಿ ವಿಭಜನೆಯಾಗಿ ದರೋಡೆ ಮಾಡಿದೆ. ಒಂದು ಕಾರ್‌ನಲ್ಲಿ ಸೆಕ್ಯೂರಿಟಿ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಯನ್ನು ಕರೆದೊಯ್ದಿದ್ದರೆ, ಮತ್ತೊಂದು ಗ್ಯಾಂಗ್ ಹಣದೊಂದಿಗೆ ಎಸ್ಕೇಪ್ ಆಗಿದೆ. ನಂತರ ಬೇರೆ ಯಾವುದೋ ಸ್ಥಳದಲ್ಲಿ ಒಂದಾಗಿ ಪರಾರಿಯಾಗಿರುವ ಶಂಕೆ ಇದೆ.
ದರೋಡೆಕೋರರು ನಕಲಿ ನಂಬರ್ ಪ್ಲೇಟ್‌ಗಳನ್ನು (fake number plates) ಬಳಸಿದ್ದರಿಂದ, ಅವರು ಬಳಸಿದ ವಾಹನಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ(major challenge).






