ಹಾಸನ: ಜಿಲ್ಲೆಯ ಬೇಲೂರು (Belur) ಪಟ್ಟಣದಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಆಕೆಯ ಶವವು ಬಾಡಿಗೆ ಮನೆ ಒಳಗೆ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಯುವತಿ ಚಿಕ್ಕಮಗಳೂರು ಜಿಲ್ಲೆಯ (Chikkamagaluru district) ಮೂಲದ ಸ್ಪಂದನ (26) (Spandana) ಎಂದು ಗುರುತಿಸಲಾಗಿದೆ. ಕೇವಲ ಎಂಟು ದಿನಗಳ ಹಿಂದೆ ಕೆಲಸದ ಉದ್ದೇಶದಿಂದ ಬೇಲೂರಿಗೆ ಆಗಮಿಸಿ ಗಾಣಿಗರ ಬೀದಿಯಲ್ಲಿ (Ganigara Street) ಮಲ್ಲಿಕಾರ್ಜುನ ಎಂಬುವರ ಮನೆಯಲ್ಲಿ ಬಾಡಿಗೆ ಪಡೆದಿದ್ದಳು.
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಯುವತಿ ನಗ್ನ ಸ್ಥಿತಿಯಲ್ಲಿ (nude state) ಮೃತ ಪತ್ತೆಯಾದ ಕಾರಣ ಘಟನೆಯ ಮೇಲೆ ಇನ್ನಷ್ಟು ಅನುಮಾನಗಳು ಎದುರಾಗಿವೆ. ದೇಹವನ್ನು ನೋಡಿದಾಗ ಕನಿಷ್ಠ ಮೂರು ದಿನಗಳ ಹಿಂದೆ ಸಾವುನಡೆದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬೇಲೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.






