ಬೀದರ್: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣಗಳ ಬೆನ್ನಲ್ಲೇ, ಬೀದರ್ (Bidar) ಜಿಲ್ಲೆಯಲ್ಲಿಯೂ ಬೃಹತ್ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೈದ್ರಾಬಾದ್-ಮುಂಬೈ (Hyderabad-Mumbai Highway) ರಾಷ್ಟ್ರೀಯ ಹೆದ್ದಾರಿ-65ರಲ್ಲಿ ಖದೀಮರು ಸಿನಿಮೀಯ ಶೈಲಿಯಲ್ಲಿ ಕಾರಿನ ಟೈರ್‌ಗೆ ಪಂಚರ್ ಮಾಡಿ ಸುಮಾರು ₹23.90 ಲಕ್ಷ (₹23.90 lakh) ಮೌಲ್ಯದ ಚಿನ್ನಾಭರಣ ದರೋಡೆ (Robbery)ಮಾಡಿದ್ದಾರೆ.
ನಿನ್ನೆ (ಬುಧವಾರ) ಬೆಳ್ಳಂಬೆಳಿಗ್ಗೆ 5 ಗಂಟೆ ಸುಮಾರಿಗೆ ಬಸವಕಲ್ಯಾಣ ತಾಲೂಕಿನ (Basavakalyana Taluk) ಸಸ್ತಾಪುರ ಗ್ರಾಮದ ಶಿವಾರದ ಎನ್‌ಹೆಚ್-65ರಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಯೇಥಗಾಂವ್‌ನಿಂದ ಹೈದ್ರಾಬಾದ್‌ನಲ್ಲಿ ನಡೆಯಲಿದ್ದ ಮದುವೆ ಆರತಕ್ಷತೆಗೆ ಹೊರಟಿದ್ದ ಕಾರಿಗೆ, ಸುಮಾರು 6 ರಿಂದ 8 ಜನ ಖದೀಮರು (6 to 8 culprits)ಹೆದ್ದಾರಿ ಮೇಲೆ ಜಾಕ್ (Jack) ಎಸೆದು, ಚಲಿಸುತ್ತಿದ್ದ ಕಾರಿನ ಟೈರ್ ಬಸ್ಟ್ (ಪಂಚರ್) ಮಾಡಿದ್ದಾರೆ.
ಟೈರ್ ಪಂಚರ್ ಆಗಿ ಕಾರು ನಿಂತ ತಕ್ಷಣ, ಖದೀಮರು ಕಾರು ಸುತ್ತುವರೆದು, ಕಾರಿನಲ್ಲಿದ್ದವರಿಗೆ ಚಾಕು ಮತ್ತು ಬಡಿಗೆ ತೋರಿಸಿ ಬೆದರಿಸಿ ದರೋಡೆ ಮಾಡಿದ್ದಾರೆ. 223 ಗ್ರಾಂ ಬಂಗಾರ(Gold), ಸುಮಾರು ₹1.60 ಲಕ್ಷ ನಗದು (Cash) ಸೇರಿ ಒಟ್ಟು ₹23.90 ಲಕ್ಷ ರೂ ದೋಚಿದ್ದಾರೆ.
ಯೇಥಗಾಂವ್ ಮೂಲದ ಪ್ರವೀಣ್ ಜರಗ ಎಂಬುವವರು ಈ ಕುರಿತು ದೂರು ನೀಡಿದ್ದು, ಈ ಸಂಬಂಧ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






