ಬೆಂಗಳೂರು: ಕರ್ನಾಟಕ (Karnataka) ಮೂಲದ ಗರ್ಭಿಣಿ ಮಹಿಳೆಯೊಬ್ಬರು ಆಸ್ಟ್ರೇಲಿಯಾ(Australia)ದ ಸಿಡ್ನಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Australia) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ದುರ್ದೈವಿ ಸಮನ್ವಿತಾ ಧಾರೇಶ್ವರ್ (Samanvitha Dhareshwar)(32) ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು(Eight months pregnant). ಕರ್ನಾಟಕದ ವಿಟಿಯು (VTU) ನಲ್ಲಿ 2010-2014 ರವರೆಗೆ ವಿದ್ಯಾಭ್ಯಾಸ ಮಾಡಿದ್ದ ಇವರು, ಸಿಡ್ನಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಐಟಿ ಉದ್ಯೋಗಿಯಾಗಿದ್ದರು(IT professional).
ಸಿಡ್ನಿಯ (Sydney) ಹಾರ್ನ್ಸ್‌ಬೈನ ಜಾರ್ಜ್ ಸ್ಟ್ರೀಟ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಸಮನ್ವಿತಾ ಅವರ ಪತಿ ಮತ್ತು ಮೂರು ವರ್ಷದ ಮಗನ ಜೊತೆಗೆ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ವೇಗವಾಗಿ ಬಂದ ಬಿಎಂಡಬ್ಲ್ಯು (BMW) ಕಾರು ಮತ್ತೊಂದು ಕಿಯಾ (Kia) ಕಾರಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿ ತಪ್ಪಿಸಲು ಕಿಯಾ ಕಾರು ಯತ್ನಿಸಿದರೂ, ಬಿಎಂಡಬ್ಲ್ಯು ಕಾರಿನ ರಭಸಕ್ಕೆ ಕಿಯಾ ಕಾರು ಬ್ಯಾಲೆನ್ಸ್ ತಪ್ಪಿ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮನ್ವಿತಾ ಧಾರೇಶ್ವರ್ ಅವರಿಗೆ ಡಿಕ್ಕಿ ಹೊಡೆಯಿತು.
ಡಿಕ್ಕಿಯ ರಭಸಕ್ಕೆ ಸಮನ್ವಿತಾ ಮತ್ತು ಅವರ ಹೊಟ್ಟೆಯಲ್ಲಿದ್ದ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೇಗವಾಗಿ ಕಾರು ಚಲಾಯಿಸಿದ್ದ ಆರೋಪಿ, 19 ವರ್ಷದ ಆರನ್ ಪಾಪಜೋಗ್ಲು (Aaron Papajorgiou) ಎಂಬ ಬಿಎಂಡಬ್ಲ್ಯು ಕಾರು ಚಾಲಕನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.






