ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ ನಡೆದ ₹7.11 ಕೋಟಿ (₹7.11 crore) ಮೌಲ್ಯದ ಎಟಿಎಂ ವಾಹನ ದರೋಡೆ ಪ್ರಕರಣದ ತನಿಖೆಯಲ್ಲಿ ಭಾರಿ ತಿರುವು ದೊರೆತಿದೆ. ಈ ದರೋಡೆಗೆ ಪೊಲೀಸ್ ಠಾಣೆಯಿಂದಲೇ ಸಂಚು ರೂಪಿಸಲಾಗಿದೆ ಎಂಬ ಆಘಾತಕಾರಿ ಶಂಕೆ ವ್ಯಕ್ತವಾಗಿದ್ದು, ಈ ಕೃತ್ಯದ ಮಾಸ್ಟರ್‌ಮೈಂಡ್ ಆಗಿದ್ದ ಒಬ್ಬ ಪೊಲೀಸ್ ಕಾನ್ಸ್‌ಟೇಬಲ್‌ನನ್ನು (police constable) ವಶಕ್ಕೆ ಪಡೆಯಲಾಗಿದೆ.
ದರೋಡೆ ಪ್ರಕರಣದಲ್ಲಿ ಗೋವಿಂದಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ (Annappa Naik) ಎಂಬಾತನನ್ನು ದಕ್ಷಿಣ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣವು ‘ಬೇಲಿಯೇ ಎದ್ದು ಹೊಲ ಮೆಯ್ದ’ ರೀತಿಯಾಗಿದೆ. ಗೋವಿಂದಪುರ ಪೊಲೀಸ್ ಠಾಣೆಯ ((Govindapura Police Station) )ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಅವರೇ ಈ ದರೋಡೆಗೆ ಸಂಪೂರ್ಣ ಪ್ಲಾನ್ ಮಾಡಿದ್ದರು ಎಂದು ಶಂಕಿಸಲಾಗಿದೆ.
ಶಂಕಿತ ಆರೋಪಿಯು ಗೋವಿಂದಪುರ ಭಾಗದ ಕೆಲ ಹುಡುಗರನ್ನು ಈ ರಾಬರಿಗೆ (Robbery)ಸಂಭಂದಿಸಿದಂತೆ ಪೊಲೀಸರು ಹೇಗೆ ಕಾರ್ಯನಿರ್ವಹಿಸುತ್ತಾರೆ, ದರೋಡೆಯನ್ನು ಹೇಗೆ ಯಶಸ್ವಿಯಾಗಿ ಮಾಡಬೇಕು ಮತ್ತು ಕೃತ್ಯದ ನಂತರ ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ಬಗ್ಗೆ ಆರೋಪಿಗಳಿಗೆ ವಿವರವಾದ ತರಬೇತಿಯನ್ನು ನೀಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಸದ್ಯ ಗೋವಿಂದಪುರ ಕಾನ್ಸ್‌ಟೇಬಲ್ ಅಣ್ಣಪ್ಪನನ್ನು ವಶಕ್ಕೆ ಪಡೆದಿರುವ ದಕ್ಷಿಣ ವಿಭಾಗದ ಪೊಲೀಸರು (South Division Police), ಈ ಬೃಹತ್ ದರೋಡೆಯ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.






