ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ (Mitlakatte) ಬಳಿ ನಡೆದ ಭೀಕರ ಬೈಕ್ ಅಪಘಾತದಲ್ಲಿ (Bike accident) ದಾವಣಗೆರೆ ಮೂಲದ ಪ್ರಿಯಾ (22) ಎಂಬ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯ ಸ್ನೇಹಿತ ಯೋಗೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಿಟ್ಲಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಪ್ರಿಯಾ (Priya) ಮತ್ತು ಆಕೆಯ ಸ್ನೇಹಿತ ಯೋಗೇಶ್ (Yogesh) ಜರಕಟ್ಟೆಯಲ್ಲಿರುವ ‘ಆಧ್ಯಾ ಹೋಟೆಲ್’ಗೆ (Aadhya Hotel) ಪಾರ್ಟಿಗಾಗಿ ತೆರಳಿದ್ದರು. ಹೋಟೆಲ್‌ನಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು.
ನಂತರ ಯೋಗೇಶ್ ಪ್ರಿಯಾಳನ್ನು ಮನವೊಲಿಸಿ ಬೈಕ್ ನಲ್ಲಿ ಕರೆದುಕೊಂಡು ಬರುವಾಗ ಬೈಕ್ ಮರಕ್ಕೆ ಗುದ್ದಿದ್ದರಿಂದ, ಸ್ಥಳದಲ್ಲೇ ಪ್ರಿಯಾ ಮೃತಪಟ್ಟಿದ್ದಾರೆ. ಯೋಗೆಶ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೂ ಮುನ್ನ ಹೋಟೆಲ್‌ನಲ್ಲಿ ಪ್ರಿಯಾ–ಯೋಗೆಶ್ ವಾಗ್ವಾದದ ಕೊನೆಯ ದೃಶ್ಯಗಳು ಸಿಸಿಟಿವಿಯಲ್ಲಿ (CCTV) ದಾಖಲೆಯಾಗಿದ್ದು, ಪೊಲೀಸರು ತನಿಖೆಗೆ ಪಡೆಯಲಾಗಿದೆ.






