ದುಬೈ: ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ದುಬೈ ಏರ್ ಶೋನಲ್ಲಿ (Dubai Air Show) ಭಾರೀ ದುರಂತವೊಂದು ಸಂಭವಿಸಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಿತ ದೇಶೀಯ ಹಗುರ ಯುದ್ಧ ವಿಮಾನವಾದ (LCA) ತೇಜಸ್ (Tejas) ಯುದ್ಧ ವಿಮಾನವು ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಪತನಗೊಂಡಿದೆ.
ದುಬೈ ಏರ್ ಶೋ ಪ್ರದರ್ಶನದ ವೇಳೆ ತೇಜಸ್ ಯುದ್ಧ ವಿಮಾನವು ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ. ವಿಮಾನ ಪತನವಾದ ತಕ್ಷಣ, ಪೈಲಟ್ ಸ್ಥಳದಲ್ಲೇ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ತೇಜಸ್ ಯುದ್ಧ ವಿಮಾನವು ಭಾರತದ ಹೆಮ್ಮೆಯ HAL ನಿರ್ಮಿತ ವಿಮಾನವಾಗಿದ್ದು, ಇದು ದುಬೈ ಏರ್ ಶೋನಲ್ಲಿ ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿತ್ತು.






