Home State Politics National More
STATE NEWS

IT ಕ್ಷೇತ್ರದಲ್ಲಿ ಹೈದರಾಬಾದ್ ಮುಂದು: ಸಿಲಿಕಾನ್ ಸಿಟಿ ಬಿರುದು ಕೈತಪ್ಪುವ ಆತಂಕದಲ್ಲಿ ಬೆಂಗಳೂರು!

Silicon city
Posted By: Meghana Gowda
Updated on: Nov 21, 2025 | 8:44 AM

ಬೆಂಗಳೂರು: ಭಾರತದ ‘ಸಿಲಿಕಾನ್ ಸಿಟಿ’ (Silicon City)ಎಂದು ಖ್ಯಾತಿ ಪಡೆದಿರುವ ಬೆಂಗಳೂರು ನಗರಕ್ಕೆ, ಈ ಕಿರೀಟ ಕಳಚುವ ಆತಂಕ ಎದುರಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಐಟಿ (IT)ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ಕ್ಷೇತ್ರದಲ್ಲಿ ಹೈದರಾಬಾದ್ ನಗರವು ಬೆಂಗಳೂರನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದ್ದು, ಮುಂದಿನ ದಿನಗಳಲ್ಲಿ ‘ಸಿಲಿಕಾನ್ ಸಿಟಿ’ ಎಂಬ ಬಿರುದು ಹೈದರಾಬಾದ್ (Hyderabad) ಪಾಲಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

UnearthIQ ಎಂಬ ಸಂಸ್ಥೆಯ ನವೆಂಬರ್ 2025 ರ ಅಧ್ಯಯನ ವರದಿಯ ಪ್ರಕಾರ, ಭಾರತದಲ್ಲಿ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (Global Capability Centers ) ಹೈದರಾಬಾದ್ ಪ್ರಸ್ತುತ ಅಗ್ರ ತಾಣವಾಗಿದೆ.

2025ನೇ ಸಾಲಿನಲ್ಲಿ ಸ್ಥಾಪಿಸಲಾದ ಎಲ್ಲಾ ಹೊಸ GCC ಗಳಲ್ಲಿ ಹೈದರಾಬಾದ್ ರಾಜ್ಯವು ಶೇಕಡಾ 46 ರಷ್ಟು ಪಾಲನ್ನು ಹೊಂದಿದೆ. ಅದೇ ಅವಧಿಯಲ್ಲಿ (ಜನವರಿ-ನವೆಂಬರ್ 2025), ಕರ್ನಾಟಕದ ಬೆಂಗಳೂರು (Bengaluru) ಕೇವಲ ಶೇಕಡಾ 33 ರಷ್ಟು ಹೊಸ GCC ಗಳನ್ನು ಹೊಂದಿದೆ.

 ವೆಚ್ಚದ ಅನುಕೂಲತೆ (Cost Effectiveness), ಸುಧಾರಿತ ಮೂಲಸೌಕರ್ಯ, ಉದ್ಯಮ-ಪರ (Business-Pro) ಪರಿಸರ ವ್ಯವಸ್ಥೆ ಮತ್ತು ತೆಲಂಗಾಣ ಸರ್ಕಾರದ ಬಲವಾದ ನೀತಿಗಳು ಉದ್ಯಮಿಗಳು ಮತ್ತು ಹೂಡಿಕೆದಾರರನ್ನು ಹೈದರಾಬಾದ್‌ ಕಡೆಗೆ ಹೆಚ್ಚು ಆಕರ್ಷಿಸುತ್ತಿದೆ ಎಂದು ವರದಿಯಾಗಿದೆ.

ಈ ಅಂಶಗಳಿಂದಾಗಿ ಹೈದರಾಬಾದ್ ನಗರವು ಬೆಂಗಳೂರಿಗಿಂತ ಹಲವು ವಿಷಯಗಳಲ್ಲಿ ಪೂರಕವಾಗಿದ್ದು, ಭಾರತದಲ್ಲಿ GCC ಗಳ ಸ್ಥಾಪನೆಗೆ ಅಗ್ರ ತಾಣವಾಗಿ ಹೊರಹೊಮ್ಮಿದೆ ಎಂದು ವರದಿ ಹೇಳುತ್ತದೆ.

 

Shorts Shorts