ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗಿನ ವೀಡಿಯೊ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಹಾಗೂ ದರ್ಶನ್ (Darshan) ಅವರ ಆಪ್ತರಾಗಿರುವ ಧನ್ವೀರ್ (Dhanveer) ಅವರು ಇಂದು (ಶುಕ್ರವಾರ) ಪರಪ್ಪನ ಅಗ್ರಹಾರ (Parappana Agrahara) ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಜೈಲಿನೊಳಗಿನ ದೃಶ್ಯಗಳಿರುವ ವೀಡಿಯೊವೊಂದು ವೈರಲ್ (viral) ಆದ ಹಿನ್ನೆಲೆಯಲ್ಲಿ ಧನ್ವೀರ್ ಅವರಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
ಕಳೆದ 13ನೇ ತಾರೀಖು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಆದರೆ, ಧನ್ವೀರ್ ಅವರು ವಕೀಲರ(lawyer) ಮೂಲಕ ಕಾಲಾವಕಾಶ ಕೋರಿದ್ದರು. ಕಳೆದ ಸೋಮವಾರ ಠಾಣೆಗೆ ಬಂದಿದ್ದರೂ, ಊಟ ಮಾಡಿ ಬರುವಂತೆ ಪೊಲೀಸರು ಹೇಳಿದಾಗ, ಮೊಬೈಲ್ ಸ್ವಿಚ್ ಆಫ್ (switched off) ಮಾಡಿಕೊಂಡು ವಿಚಾರಣೆಗೆ ಹಾಜರಾಗದೆ ಗೈರಾಗಿದ್ದರು.
ಹಲವು ದಿನಗಳ ನಾಟಕೀಯ ಬೆಳವಣಿಗೆಗಳ ಬಳಿಕ ದರ್ಶನ್ ಆಪ್ತ ಧನ್ವೀರ್ ಇಂದು ಅಂತಿಮವಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದು, ಪರಪ್ಪನ ಅಗ್ರಹಾರ ಪೊಲೀಸರಿಂದ ಜೈಲಿನೊಳಗಿನ ವಿಡಿಯೋ ವೈರಲ್ ಸಂಬಂಧ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ.






