Home State Politics National More
STATE NEWS

Belagaviಯಲ್ಲಿ ಸೇನಾ ಭರ್ತಿ | ಚಳಿ, ಗಾಳಿಯನ್ನು ಲೆಕ್ಕಿಸದೆ ದೇಶ ಸೇವೆಗೆ ಸೈ ಎಂದ ಯುವಕರು!

Army
Posted By: Meghana Gowda
Updated on: Nov 23, 2025 | 5:07 AM

ಬೆಳಗಾವಿ: ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೆ, ದೇಶ ಸೇವೆಯ ಮಹದಾಸೆಯಿಂದ ಯುವ ಸಮೂಹವೊಂದು ಬೆಳಗಾವಿಯಲ್ಲಿ (Belagavi) ನಡೆಯುತ್ತಿರುವ ಸೇನಾ ಭರ್ತಿ (Military recruitment)ರ್ಯಾಲಿಯಲ್ಲಿ ಕಿಕ್ಕಿರಿದು ಸೇರಿದೆ. ಟೆರಿಟೋರಿಯಲ್ ಆರ್ಮಿ (Territorial Army) ನೇತೃತ್ವದಲ್ಲಿ ನಡೆಯುತ್ತಿರುವ ಈ ರ್ಯಾಲಿಯು ಕಳೆದ ಮೂರು ದಿನಗಳಿಂದ ಸಾವಿರಾರು ಯುವಕರನ್ನು ಆಕರ್ಷಿಸಿದೆ.

ಕಠಿಣ ಪರಿಸ್ಥಿತಿಗಳಲ್ಲಿ ದೇಶವನ್ನು ಕಾಯುವ ಸೈನಿಕರು, ಭರ್ತಿಯ ಹಂತದಲ್ಲೂ ಅಷ್ಟೇ ಛಲವನ್ನು ಪ್ರದರ್ಶಿಸಿದ್ದು, ಬೆಳಗಾವಿಯ ಕ್ಲಬ್ ರೋಡ್ (Club Road)ಮತ್ತು ಸಿಪಿಎಡ್ ಮೈದಾನದಲ್ಲಿ (CPED grounds)ಅಭ್ಯರ್ಥಿಗಳು ತುಂಬಿ ಹೋಗಿದ್ದಾರೆ.

ಚಳಿ-ಗಾಳಿಯನ್ನು ಲೆಕ್ಕಿಸದೆ ತಡರಾತ್ರಿ 2 ಗಂಟೆಯಿಂದಲೇ ಸೇನಾ ರ್ಯಾಲಿಗೆ ಸಿದ್ಧರಾಗಿ, ಮೈದಾನವನ್ನೇ ಹಾಸಿಗೆ ಮಾಡಿಕೊಂಡು ಮಲಗಿರುವ ಯುವಕರು ಒಂದು ಕಡೆಯಾದರೆ, ಮತ್ತೊಂದು ಕಡೆ  ರಸ್ತೆಯ ಅಕ್ಕಪಕ್ಕದ ಫುಟ್‌ಪಾತ್‌ಗಳ ಮೇಲೂ ಜಾಗ ಹಿಡಿದಿದ್ದಾರೆ.

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಈ ಸೇನಾ ಭರ್ತಿ ರ್ಯಾಲಿಯಲ್ಲಿ ಬೆಳಗಾವಿ, ಬೆಂಗಳೂರು ಗ್ರಾಮೀಣ, ಮೈಸೂರು, ರಾಮನಗರ, ಮಂಡ್ಯ, ಬೆಂಗಳೂರು ಅರ್ಬನ್ ಹಾಗೂ ದಾವಣಗೆರೆ ಸೇರಿದಂತೆ ಒಟ್ಟು ಏಳು ಜಿಲ್ಲೆಗಳ ಯುವಕರು ಭಾಗವಹಿಸಿದ್ದಾರೆ.

Shorts Shorts