Home State Politics National More
STATE NEWS

Bengaluruರಲ್ಲಿ ₹7.11 ಕೋಟಿ ದರೋಡೆ: ಕೊನೆಗೂ ‘ಕಿಂಗ್ ಪಿನ್’ ರವಿಯನ್ನು ಅರೆಸ್ಟ್ ಮಾಡಿದ ಖಾಕಿ ಪಡೆ!

Bengaluru cash van robbery case solved 5 crore rec
Posted By: Meghana Gowda
Updated on: Nov 23, 2025 | 9:18 AM

ಬೆಂಗಳೂರು: ಬೆಂಗಳೂರಿನಲ್ಲಿ ಸಂಚಲನ ಮೂಡಿಸಿದ್ದ ₹7.11 ಕೋಟಿ (₹7.11 Crore) ಮೌಲ್ಯದ ಸಿಎಂಎಸ್‌ (CMS) ಹಣ ಸಾಗಾಟ ವಾಹನದ ದರೋಡೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ‘ಕಿಂಗ್ ಪಿನ್’ ಎನ್ನಲಾದ ರವಿ(Ravi) ಯನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರ ಪೊಲೀಸರ ಸಹಕಾರದೊಂದಿಗೆ ಹೈದರಾಬಾದ್‌ನಲ್ಲಿ ರವಿಯನ್ನು ಬಂಧಿಸಿ, ಇದೀಗ ಬೆಂಗಳೂರಿಗೆ ಕರೆತರುತ್ತಿದ್ದಾರೆ.

ಕಿಂಗ್ ಪಿನ್ ರವಿ ಹೈದರಾಬಾದ್‌ನಲ್ಲಿರುವ (Hyderabad) ಲಾಡ್ಜ್ ಒಂದರಲ್ಲಿ ರೂಂ ಮಾಡಿಕೊಂಡು ತಲೆಮರೆಸಿಕೊಂಡಿದ್ದ. ಪೊಲೀಸರು ಹಿಡಿಯಬಹುದು ಎಂದು ನಿರೀಕ್ಷಿಸಿ ನಿನ್ನೆ (Saturday)) ಲಾಡ್ಜ್‌ನಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದ.

ಮೊಬೈಲ್ ಸ್ವಿಚ್ ಆಫ್ ಮಾಡಿ, ತನ್ನ ಬ್ಯಾಗ್‌ನಲ್ಲಿ ಸುಮಾರು ₹10 ಲಕ್ಷ ನಗದು (₹10 Lakh in cash ) ಇಟ್ಟುಕೊಂಡು ಲಾಡ್ಜ್‌ನಲ್ಲಿ ನಿದ್ದೆಯಿಲ್ಲದೆ ಕೂತಿದ್ದ ರವಿಯನ್ನು ಆಂಧ್ರ ಪ್ರದೇಶದ ಪೊಲೀಸರ ನೆರವಿನೊಂದಿಗೆ ಬೆಂಗಳೂರು ಪೊಲೀಸರು (Bengaluru police)  ಬಂಧಿಸಿದ್ದಾರೆ. ಬಂಧಿತ ರವಿಯನ್ನು ಇದೀಗ ಬೆಂಗಳೂರಿಗೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ.

ಉಳಿದ ಆರೋಪಿಗಳು ಮತ್ತು ಹಣ ರಿಕವರಿ

ರವಿ ಬಂಧನಕ್ಕೂ ಮುನ್ನವೇ ಆತನ ಸಹೋದರ ರಾಕೇಶ (Rakesh)  ಪೊಲೀಸರಿಗೆ ಶರಣಾಗಿದ್ದ. ಆತನ ಬಳಿಯಿದ್ದ ₹10 ಲಕ್ಷ ರೂಪಾಯಿಗಳನ್ನು ಪೊಲೀಸರು ರಿಕವರಿ ಮಾಡಿಕೊಂಡಿದ್ದಾರೆ. ದರೋಡೆಗೆ ಬಳಸಿದ್ದ ಇನ್ನೋವಾ ಕಾರನ್ನು ಕೂಡ ಚಿತ್ತೂರಿನಿಂದ ಪತ್ತೆಹಚ್ಚಿ, ವಶಪಡಿಸಿಕೊಂಡು (PF ಹಾಕಲಾಗಿದೆ) ಬೆಂಗಳೂರಿಗೆ ತರಲಾಗಿದೆ.

ಈ ದರೋಡೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಜೋಯನ್  (Joyan) ಮಾತ್ರ ಈಗ ತಲೆಮರೆಸಿಕೊಂಡಿದ್ದಾನೆ. ಆತ ಗೋವಾ ಗಡಿಯ (Goa border) ಸಮೀಪದಲ್ಲಿ ಅಡಗಿ ಓಡಾಡುತ್ತಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Shorts Shorts