ಬೆಂಗಳೂರು: ನಗರದಲ್ಲಿ ಸಂಚಲನ ಮೂಡಿಸಿದ್ದ ಸಿಎಂಎಸ್ (CMS) ಎಟಿಎಂ ಹಣ ಸಾಗಾಟ ವಾಹನದ ಮೇಲಿನ ₹7.11 ಕೋಟಿ (₹7.11 Crore) ದರೋಡೆ ಪ್ರಕರಣದ ತನಿಖೆಯಲ್ಲಿ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿದೆ. ಅಸಲಿಗೆ ಆರೋಪಿಗಳ ಪ್ಲಾನ್ ₹7 ಕೋಟಿ ದರೋಡೆ ಮಾಡುವುದಾಗಿರಲಿಲ್ಲ, ಬದಲಿಗೆ ₹25 ಕೋಟಿಗೂ (over ₹25 Crore) ಅಧಿಕ ಹಣ ದರೋಡೆ ಮಾಡುವುದಾಗಿತ್ತು. ಆದರೆ ನಿರೀಕ್ಷಿತ ಹಣ ಸಿಗದ ಕಾರಣ ದರೋಡೆ ಯಶಸ್ವಿಯಾದರೂ ಆರೋಪಿಗಳು ನಿರಾಸೆಗೊಂಡಿದ್ದಾರೆ.
ಸಿಎಂಎಸ್ (CMS) ಏಜೆನ್ಸಿಯು ಭಾರತದಲ್ಲೇ (India)ಅತ್ಯಂತ ದೊಡ್ಡ ಹಣ ಸಾಗಾಟ ಮಾಡುವ ಏಜೆನ್ಸಿಯಾಗಿದ್ದು(Agencies), ದೇಶದ ಬಹುತೇಕ ಶೇ 80ರಷ್ಟು ಹಣವನ್ನು ಸಾಗಾಟ ಮಾಡುವ ಏಕೈಕ ಕಂಪನಿಯಾಗಿದೆ. ಈ ಸಿಎಂಎಸ್ ವಾಹನವು ಜೆಪಿ ನಗರದಿಂದ ಆಗಾಗ ಹಣವನ್ನು ಸಾಗಾಟ ಮಾಡುತ್ತಿತ್ತು. ಹಲವು ಬಾರಿ ಈ ವಾಹನದಲ್ಲಿ ₹50 ಕೋಟಿ ಹಣವನ್ನು ಸಾಗಾಟ ಮಾಡಿರುವ ಉದಾಹರಣೆಗಳಿವೆ.
ಸಿಬ್ಬಂದಿ ಜೆಪಿ ನಗರದಿಂದ (J.P. Nagar) ಹಣವನ್ನು ಸಂಗ್ರಹಿಸಿ ಲಿಂಗರಾಜಪುರದಲ್ಲಿರುವ ಕಚೇರಿಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ಲಿಂಗರಾಜಪುರದ ಕಚೇರಿಯಲ್ಲಿ ಪ್ರತಿ ನಿತ್ಯ ಹಣವನ್ನು ಡಿಸ್ಟ್ರಿಬ್ಯೂಟ್ (Distributed)ಮಾಡಲಾಗುತ್ತಿತ್ತು ಮತ್ತು ಯಾವ ಎಟಿಎಂಗೆ ಎಷ್ಟು ಹಣ ಹಾಕಬೇಕು ಎಂಬುದನ್ನು ಅಲ್ಲಿಂದಲೇ ನಿರ್ಧರಿಸಲಾಗುತ್ತಿತ್ತು.
ದರೋಡೆ ಮಾಡಿದ ದಿನದಂದು ವಾಹನದಲ್ಲಿ ₹25 ಕೋಟಿಗೂ ಅಧಿಕ ಹಣ ಇರಬಹುದು ಎಂದು ಆರೋಪಿಗಳು ನಿರೀಕ್ಷೆ ಮಾಡಿದ್ದರು. ಆದರೆ, ದುರದೃಷ್ಟವಶಾತ್ (ಆರೋಪಿಗಳ ದೃಷ್ಟಿಯಲ್ಲಿ), ವಾಹನದಲ್ಲಿ ಸಾಗಾಟವಾಗುತ್ತಿದ್ದದ್ದು ಕೇವಲ ₹7 ಕೋಟಿ 11 ಲಕ್ಷ ಮಾತ್ರ.
‘ದಿ ಗ್ರೇಟ್ ರಾಬರಿ’ ಯಶಸ್ವಿಯಾದರೂ, ಆರೋಪಿಗಳು ನಿರೀಕ್ಷಿಸಿದಷ್ಟು ಹಣ ಸಿಗದ ಕಾರಣ ಅವರಿಗೆ ತೀವ್ರ ನಿರಾಸೆ ಉಂಟಾಗಿತ್ತು. ಒಂದು ವೇಳೆ ಅವರ ನಿರೀಕ್ಷೆಯಂತೆ ಹಣ ಸಿಕ್ಕಿದ್ದರೆ, ಇದು ಭಾರತದಲ್ಲೇ ನಡೆದ ಅತ್ಯಂತ ದೊಡ್ಡ ಹಣ ದರೋಡೆ (Robbery)ಪ್ರಕರಣವಾಗುತ್ತಿತ್ತು.






