Home State Politics National More
STATE NEWS

Mandyaದಲ್ಲಿ ಡಿಕೆಶಿಗೆ ಮುಖಭಂಗ: ಗಿಳಿಶಾಸ್ತ್ರದ ಮೊರೆ ಹೋದ ಬಿಜೆಪಿ ಕಾರ್ಯಕರ್ತರು

Mandya bjp
Posted By: Meghana Gowda
Updated on: Nov 23, 2025 | 9:38 AM

ಮಂಡ್ಯ: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah)  ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Deputy CM D.K. Shivakumar)  ನಡುವಿನ ಅಧಿಕಾರ ಹಂಚಿಕೆ (power-sharing) ವಿವಾದ ತೀವ್ರಗೊಂಡಿರುವ ನಡುವೆಯೇ, ವಿಪಕ್ಷ ಬಿಜೆಪಿ ಈ ವಿಷಯವನ್ನು ಹೊಸ ಅಸ್ತ್ರವಾಗಿ ಬಳಸತೊಡಗಿದೆ. ಡಿ.ಕೆ. ಶಿವಕುಮಾರ್ ಅವರು ಈ ಹಿಂದೆ ಬಿಜೆಪಿಯವರಿಗೆ ಗಿಳಿಶಾಸ್ತ್ರ ಕೇಳಿ ಎಂದು ವ್ಯಂಗ್ಯವಾಡಿದ್ದಕ್ಕೆ, ಇದೀಗ ಬಿಜೆಪಿ ಕಾರ್ಯಕರ್ತರು (BJP leaders) ಅದನ್ನೇ ಅಸ್ತ್ರವಾಗಿ ಬಳಸಿದ್ದಾರೆ.

ಸಿಎಂ ಕುರ್ಚಿಗಾಗಿ ಡಿ.ಕೆ. ಶಿವಕುಮಾರ್ ಆಪ್ತ ಶಾಸಕರು ಮತ್ತು ಅಭಿಮಾನಿಗಳು ದೆಹಲಿಯಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗರು ಟೀಕಾಪ್ರಹಾರ ಆರಂಭಿಸಿದ್ದಾರೆ.

ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕವಾಗಿ ಗಿಳಿ ಶಾಸ್ತ್ರಜ್ಞರನ್ನು ಕರೆಸಿ, “ಡಿಕೆಶಿ ಸಿಎಂ ಆಗ್ತಾರಾ? ಇಲ್ಲವಾ?” ಎಂದು ಕೇಳುವ ಮೂಲಕ ವ್ಯಂಗ್ಯವಾಡಿದ್ದಾರೆ. ಈ ‘ಗಿಳಿಶಾಸ್ತ್ರ’ (Gili Shastra) ಆಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BJP State President B.Y. Vijayendra ) ಅವರು ಈ ವ್ಯಂಗ್ಯವನ್ನು ಸಮರ್ಥಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಫೈಟ್ ಬಗ್ಗೆ ಗಿಳಿಯೂ ಕೂಡ ಹೇಳಿಬಿಟ್ಟಿದೆ. ಜನರಿಗೆ ಒಳ್ಳೆಯದಾಗಬೇಕಿದ್ದರೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ಉತ್ತಮ. ಆದರೆ, ಡಿಕೆಶಿ ಸಿಎಂ ಆದರೆ ಜನರಿಗೆ ‘ಚೊಂಬೇ’ (ಏನೂ ಸಿಗುವುದಿಲ್ಲ) ಎಂದು ಗಿಳಿ ಹೇಳಿದೆ,” ಎಂದು ವಿಜಯೇಂದ್ರ ಅವರು ವ್ಯಂಗ್ಯವಾಡಿದ್ದಾರೆ.

ಚುನಾವಣೆಯ ನಂತರ ಸಿಎಂ ಸ್ಥಾನವನ್ನು ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದರು. ಆದರೆ, 2.5 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ‘ರೋಟೇಷನ್ ಸಿಎಂ ಫಾರ್ಮುಲಾ’ ಪಾಲಿಸಬೇಕೆಂದು ಡಿಕೆಶಿ ಬೆಂಬಲಿಗರು ಮತ್ತು ಆಪ್ತ ಶಾಸಕರು ಒತ್ತಾಯಿಸುತ್ತಿದ್ದಾರೆ.

Shorts Shorts