ಮೈಸೂರು: ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ನಟ ದರ್ಶನ್ ಅವರ ಹೊಸ ಸಿನಿಮಾ ‘ಡೆವಿಲ್’ (Devil) ಪ್ರಚಾರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ( Pratap Simha) ಅವರು ಪಾಲ್ಗೊಂಡು ಸಾರ್ವಜನಿಕವಾಗಿ ಪೋಸ್ಟರ್ ಬಿಡುಗಡೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ ಪೋಸ್ಟರ್ (poster)ಬಿಡುಗಡೆ ಮಾಡಿದ ಪ್ರತಾಪ್ ಸಿಂಹ, ತಾವು ದರ್ಶನ್ ಅವರ ಅಭಿಮಾನಿ ಎಂದು ಘೋಷಿಸಿದರು.
ಕನ್ನಡದಲ್ಲಿ ಸಾಕಷ್ಟು ನಟರು ಸ್ಟಾರ್‌ಗಳಾಗಿ ಹೊರಹೊಮ್ಮಿದ್ದಾರೆ. ಆದರೆ, ಅತೀ ಹೆಚ್ಚು ಫ್ಯಾನ್ಸ್ ಇರೋದು ಒನ್ ಅಂಡ್ ಓನ್ಲಿ ದರ್ಶನ್‌ಗೆ ಮಾತ್ರ. ನಾನು ‘ಮೆಜೆಸ್ಟಿಕ್'(Majestic), ‘ಕರಿಯ’ (Kariya)ಆ ಕಾಲದ ಸಿನಿಮಾಗಳನ್ನು ನೋಡುತ್ತಾ ಬಂದಿದ್ದೇನೆ. ‘ಕೆಂಚಾಲೋ ಮಂಚಾಲೋ’ ಹಾಡು ದೊಡ್ಡ ಕ್ರೇಜ್ ಹುಟ್ಟಿಸಿತ್ತು. ಆ ಕಾಲದಿಂದಲೂ ನಾನು ದರ್ಶನ್ ಅಭಿಮಾನಿ.
ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿದ್ದು, ಕನ್ನಡ ಚಿತ್ರದ (Kannada cinema) ಬೆಳವಣಿಗೆಗೆ ದೊಡ್ಡ ಕೊಡುಗೆ (ಕಾಂಟ್ರ್ಯೂಬುಷನ್) ನೀಡಿದ್ದಾರೆ,” ಎಂದು ಪ್ರತಾಪ್ ಸಿಂಹ ಶ್ಲಾಘಿಸಿದರು.
ಸಿನಿಮಾ ಬಿಡುಗಡೆಗೆ ಶುಭ ಹಾರೈಕೆ
‘ಡೆವಿಲ್’ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ ಪ್ರತಾಪ್ ಸಿಂಹ, ಆರಂಭದಲ್ಲಿ ಡಿಸೆಂಬರ್ 12ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಅಭಿಮಾನಿಗಳ ಒತ್ತಾಯದ ಮೇರೆಗೆ ಡಿಸೆಂಬರ್ 11ಕ್ಕೆ ರಿಲೀಸ್ ಆಗುತ್ತಿದೆ. ಕನ್ನಡ ಜನರ ಪ್ರೀತಿ ಸಿನಿಮಾವನ್ನು ಗೆಲ್ಲಿಸಲಿ. ತಾಯಿ ಚಾಮುಂಡೇಶ್ವರಿಯ ಕೃಪೆ ದರ್ಶನ್ ಮೇಲಿರಲಿ. ಈ ಸಿನಿಮಾ ಅದ್ಭುತ ಯಶಸ್ಸು ಕಾಣಲಿ,” ಎಂದು ಅವರು ಹಾರೈಸಿದರು.






