ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ (Corruption) ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ 11 ವಿವಿಧ ಸ್ಥಳಗಳಲ್ಲಿ (11 different locations) ಏಕಕಾಲಕ್ಕೆ ದಾಳಿ ನಡೆಸಿ, ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:
Koppal ಜಿಲ್ಲಾ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ಸ್ಟ್ರೆಚರ್ ಸಿಗದೆ ತಾಯಿಯನ್ನು ಎತ್ತಿಕೊಂಡೇ ಓಡಾಡಿದ ಮಗ
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಲೋಕಾಯುಕ್ತ (Lokayukta)ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳ ವಿವರ ಇಲ್ಲಿದೆ:
| ಜಿಲ್ಲೆ | ಅಧಿಕಾರಿ ಮತ್ತು ಹುದ್ದೆ | ಇಲಾಖೆ/ಸಂಸ್ಥೆ |
| ಬೆಂಗಳೂರು | ಕುಮಾರಸ್ವಾಮಿ | RTO ಸೂಪರಿಂಟೆಂಡೆಂಟ್ |
| ಮಂಡ್ಯ | ಪುಟ್ಟಸ್ವಾಮಿ | ನಗರ ಪಾಲಿಕೆ CAO |
| ಬೀದರ್ | ಪ್ರೇಮ್ ಸಿಂಗ್ | ಕೃಷ್ಣಾ ಮೇಲ್ದಂಡೆ ಯೋಜನೆ ಮು. ಇಂಜಿನಿಯರ್ |
| ಮೈಸೂರು | ರಾಮಸ್ವಾಮಿ ಸಿ. | ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್‌ಪೆಕ್ಟರ್ |
| ಧಾರವಾಡ | ಸುಭಾಶ್ ಚಂದ್ರ | ಕರ್ನಾಟಕ ವಿ.ವಿ. ಸಹಾಯಕ ಪ್ರಾಧ್ಯಾಪಕ |
| ಧಾರವಾಡ | ಸತೀಶ್ | ಪ್ರಾ. ಪಶು ಕ್ಲಿನಿಕ್, ಹುಲಿಗೋಲ್ ಹಿರಿಯ ಪರೀಕ್ಷಕ |
| ಶಿವಮೊಗ್ಗ | ಲಕ್ಷ್ಮೀಪತಿ ಸಿ.ಎನ್ | SIMS ಮೆಡಿಕಲ್ ಕಾಲೇಜ್ FDA |
| ದಾವಣಗೆರೆ | ಪ್ರಭು ಜೆ. | APMC ಸಹಾಯಕ ನಿರ್ದೇಶಕ |
| ಮೈಸೂರು (ಮಡಿಕೇರಿ) | ಗಿರೀಶ್ ಡಿ.ಎಂ | PWD, ಸಹಾಯಕ ಅಧೀಕ್ಷಕ ಇಂಜಿನಿಯರ್ |
| ಹಾವೇರಿ | ಶೇಕಪ್ಪ | ಯೋಜನಾ ನಿರ್ದೇಶಕ ಕಚೇರಿ ಇಇ |
ಅಕ್ರಮ ಆಸ್ತಿಗಳ ಸಂಪಾದನೆಗೆ ಸಂಬಂಧಿಸಿದಂತೆ ಈ ಅಧಿಕಾರಿಗಳ (officers)ವಿರುದ್ಧ ದೂರುಗಳು ದಾಖಲಾಗಿದ್ದವು. ದಾಳಿ ಮುಂದುವರಿದಿದ್ದು, ಆಸ್ತಿ ವಿವರಗಳು ಪತ್ತೆಯಾಗುವ ಸಾಧ್ಯತೆ ಇದೆ.






