Home State Politics National More
STATE NEWS

ರಾಹುಲ್ ಗಾಂಧಿಯನ್ನ ಬಿಟ್ಟು ಮೋಹನ್ ಭಾಗವತ್‌ರನ್ನು ಭೇಟಿ ಮಾಡ್ಬೇಕಿತ್ತಾ? – ಪ್ರಿಯಾಂಕ್ ಖರ್ಗೆ ವ್ಯಂಗ್ಯ

Priyank Kharge
Posted By: Meghana Gowda
Updated on: Nov 26, 2025 | 6:53 AM

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಗೊಂದಲದ ಚರ್ಚೆ ತೀವ್ರಗೊಂಡಿರುವ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಅವರು ತೀವ್ರ ವ್ಯಂಗ್ಯಭರಿತ ಹೇಳಿಕೆ ನೀಡಿದ್ದಾರೆ. “ನಾನು ರಾಹುಲ್ ಗಾಂಧಿಯವರನ್ನ(Rahul Gandhi.) ಭೇಟಿ ಆಗದೆ ಮೋಹನ ಭಾಗವತ್ (Mohan Bhagwat )ಅವರನ್ನು ಭೇಟಿ ಆಗಬೇಕಿತ್ತಾ…?” ಎಂದು ಪ್ರಶ್ನಿಸುವ ಮೂಲಕ ತಮ್ಮ ಭೇಟಿಯನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ, ಮಾಧ್ಯಮಗಳೇ ಗೊಂದಲ ಸೃಷ್ಟಿಸಿವೆ ಎಂದು ವಾದಿಸಿದರು.

ಪ್ರಿಯಾಂಕ್ ಖರ್ಗೆ ಅವರು ತಮ್ಮ ಭೇಟಿ ಮತ್ತು ರಾಜ್ಯ ರಾಜಕೀಯದ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಎಐ (Artificial Intelligence) ಟೆಕ್ನಾಲಜಿ ಬಗ್ಗೆ ರಾಹುಲ್ ಗಾಂಧಿ ಜೊತೆ ಚರ್ಚೆ ಮಾಡಲು ಭೇಟಿ ಆಗಿದ್ದೆ, ಜೊತೆಗೆ, ಸಿಎಂ ಮತ್ತು ಡಿಸಿಎಂ ಅವರಿಗೆ ನಾನು ಯಾಕೆ ಹೋಗಿದ್ದೆ ಅನ್ನೋದು ತಿಳಿಸಿದ್ದೇ‌ನೆ. ಹಾಗೂ ಓಟ್ ಚೋರಿ ಪ್ರಕರಣ, ಚಿಲುಮೆ ವಿಚಾರ (Vote Chori’ and ‘Chilume’ cases)ಕುರಿತು ಚರ್ಚೆ ಮಾಡಿ‌ ಬಂದಿದ್ದೇನೆ.

ನಾನು ರಾಹುಲ್ ಗಾಂಧಿಗೆ ವರದಿ ಕೊಟ್ಟೆ ಅಂತ ಯಾರು ಹೇಳಿದರು? ರಾಜ್ಯದ ವಿಚಾರ ಮಾತಾಡಿರಬಹುದು, ಮಾತನಾಡದೆ ಇರಬಹುದು.   ಸಿಎಂ ಮತ್ತು ಡಿಸಿಎಂ ಭೇಟಿ ಬಗ್ಗೆ “ಕೇಶವ ಕೃಪಾಗೆ ( Keshav Kripa) ಹೋಗಿ ಹೇಳಬೇಕಿತ್ತಾ?” ಎಂದು ಮರುಪ್ರಶ್ನಿಸಿದ ಅವರು, “ಕಾಂಗ್ರೆಸ್‌ನಲ್ಲಿ ಗೊಂದಲ ಇಲ್ಲ, ಬಿಜೆಪಿಯಲ್ಲಿ ಮತ್ತು ಮಾಧ್ಯಮದಲ್ಲಿ ಗೊಂದಲ ಇದೆ,” ಎಂದು ಆರೋಪಿಸಿದರು.

ಪವರ್ ಶೇರಿಂಗ್ ಬಗ್ಗೆ 3-4 ಜನರಿಗೆ ಮಾತ್ರ ಗೊತ್ತಿದೆ. ಅದೆಲ್ಲ ಹೈಕಮಾಂಡ್‌ಗೆ ಬಿಟ್ಟಿದ್ದು. ನಾವು ಮಾಧ್ಯಮದಲ್ಲಿ ಪ್ರೈಮ್ ಟೈಮಲ್ಲಿ ಕುಳಿತು ನಿರ್ಧಾರ ಮಾಡೋಕೆ ಆಗುತ್ತಾ? ಹೈಕಮಾಂಡ್ (High Command) ಚರ್ಚೆ ಮಾಡುತ್ತೆ. ಶಾಸಕರು ಅವರ ಅಭಿಪ್ರಾಯ ತಿಳಿಸಬಹುದು. ಏನೇ ಇದ್ದರೂ ವರಿಷ್ಠರು ತೀರ್ಮಾನ ಮಾಡ್ತಾರೆ. ಅಲ್ಟಿಮೇಟ್ (ಅಂತಿಮ ನಿರ್ಧಾರ) ಹೈಕಮಾಂಡ್‌ನದ್ದೇ. ಸಿಎಂ, ಡಿಸಿಎಂ ಇಬ್ಬರೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದಾರೆ, ಮತ್ಯಾಕೆ ಗೊಂದಲ?” ಎಂದು ಪ್ರಶ್ನಿಸಿದರು.

ಯಾವುದೇ ಒಬ್ಬರಿಂದ ಪಾರ್ಟಿ ಇಲ್ಲ. ಸಿದ್ದರಾಮಯ್ಯನವರು ಪ್ರಬಲ‌ ನಾಯಕರು. ಆದರೆ, ಸಾಕಷ್ಟು ಪ್ರಬಲ‌ ನಾಯಕರು ಪಕ್ಷದಲ್ಲಿ ಇದ್ದಾರೆ, ಎಲ್ಲರೂ ಸೇರಿದರೆ ಪಾರ್ಟಿ. ಪಾರ್ಟಿ ಕಾರ್ಯಕರ್ತರನ್ನು ಬೆಳೆಸುತ್ತೆ, ಕಾರ್ಯಕರ್ತರು ನಾಯಕರನ್ನ ಬೆಳೆಸುತ್ತಾರೆ. ಸಿದ್ದರಾಮಯ್ಯ (C.M Siddaramaiah) , ಡಿ.ಕೆ. ಶಿವಕುಮಾರ್ (D.K. Shivakumar), ಜಾರಕಿಹೊಳಿ (Jarkiholi)ಎಲ್ಲರೂ ಕಾರ್ಯಕರ್ತರು ಬೆಳೆಸಿದ ನಾಯಕರು ಎಂದು ಹೇಳುವ ಮೂಲಕ ಸಾಮೂಹಿಕ ನಾಯಕತ್ವದ ಮಹತ್ವವನ್ನು ಒತ್ತಿ ಹೇಳಿದರು.

Shorts Shorts