Home State Politics National More
STATE NEWS

POCSO Case Verdict | ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ನಿರ್ದೋಷಿ

Muruga mutt
Posted By: Meghana Gowda
Updated on: Nov 26, 2025 | 10:23 AM

ಚಿತ್ರದುರ್ಗ: ಚಿತ್ರದುರ್ಗದ (Chitradurga)ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ (Shivajmurthy Murugha Sharanaru)  ವಿರುದ್ಧ ದಾಖಲಾಗಿದ್ದ ಮೊದಲ ಪೋಕ್ಸೋ (POCSO) ಪ್ರಕರಣದಲ್ಲಿ ಅವರಿಗೆ ಮಹತ್ವದ ಬಿಡುಗಡೆ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸಿದ ಚಿತ್ರದುರ್ಗದ 2ನೇ ಅಪರ ಜಿಲ್ಲಾ ನ್ಯಾಯಾಲಯವು ಶ್ರೀಗಳು ನಿರ್ದೋಷಿ ಎಂದು ಆದೇಶಿಸಿದೆ ಮತ್ತು ಅವರನ್ನು ಬಿಡುಗಡೆ ಮಾಡಲು ಆದೇಶ ನೀಡಿದೆ.

ನ್ಯಾಯಾಧೀಶ ಗಂಗಾಧರ್ ಚನ್ನಬಸಪ್ಪ ಹಡಪದ (ustice Gangadhar Channabasappa Hadapada ) ಅವರು ಇಂದು (ನವೆಂಬರ್ 26, 2025) ತೀರ್ಪು ಪ್ರಕಟಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್, ಶಿವಮೂರ್ತಿ ಶರಣರು ಈ ಪ್ರಕರಣದಲ್ಲಿ ನಿರ್ದೋಷಿ (Innocent)ಎಂದು ತೀರ್ಪು ನೀಡಿ, ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಆದೇಶ ನೀಡಿದೆ.

ಇಬ್ಬರು ಸಂತ್ರಸ್ತೆಯರ ದೂರಿನ ಆಧಾರದ ಮೇಲೆ ದಾಖಲಾಗಿದ್ದ ಮೊದಲ ಪ್ರಕರಣ ಇದಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಪ್ರತ್ಯೇಕ ಚಾರ್ಜ್ ಶೀಟ್‌ಗಳನ್ನು (A and B Charge Sheets) ಸಲ್ಲಿಸಿದ್ದರು.

ಪ್ರಕರಣದ ಹಿನ್ನೆಲೆ

ಮುರುಘಾಶ್ರೀ ವಿರುದ್ಧ 2022ರ ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ (Nazarbad Police Station in Mysuru) ಮೊದಲ ಪೋಕ್ಸೋ ಕೇಸ್ ದಾಖಲಾಗಿತ್ತು. ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಈ ದೂರು ನೀಡಿದ್ದರು. ಈ ಪ್ರಕರಣದಲ್ಲಿ A1 ಮುರುಘಾಶ್ರೀ, A2 ಲೇಡಿ ವಾರ್ಡನ್ ರಶ್ಮಿ, A3 ಬಸವಾದಿತ್ಯ, A4 ಮ್ಯಾನೇಜರ್ ಪರಮಶಿವಯ್ಯ, ಮತ್ತು A5 ವಕೀಲ ಗಂಗಾಧರಯ್ಯ ವಿರುದ್ಧ ಕೇಸ್ ದಾಖಲಾಗಿತ್ತು.

ನಂತರ 2022ರ ಸೆಪ್ಟೆಂಬರ್ 1 ರಂದು ಮುರುಘಾಶ್ರೀ (A1) ಮತ್ತು ವಾರ್ಡನ್ ರಶ್ಮಿ (A2) ಬಂಧನಕ್ಕೊಳಗಾಗಿದ್ದರು. ಡಿವೈಎಸ್ಪಿ ಅನಿಲ್‌ (DySP Anil) ನೇತೃತ್ವದ ತಂಡವು 694 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಈ ಚಾರ್ಜ್‌ಶೀಟ್‌ನಲ್ಲಿ ಪೋಕ್ಸೋ, ಅಟ್ರಾಸಿಟಿ (ದಲಿತ ದೌರ್ಜನ್ಯ ತಡೆ ಕಾಯ್ದೆ), ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆಯಡಿ ಶ್ರೀಗಳ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಲೇಡಿ ವಾರ್ಡನ್ ಮೂಲಕ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಶ್ರೀಗಳ ಮೇಲಿತ್ತು.

Shorts Shorts