ಮೈಸೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah)ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ‘ಪವರ್ ಶೇರಿಂಗ್’ (power sharing) ಕದನ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಮತ್ತು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ನಾಯಕತ್ವ ಬದಲಾವಣೆ ವಿಚಾರ ಪದೇ ಪದೇ ಯಾಕೆ ಚರ್ಚೆ ಆಗುತ್ತಿದೆ ಅಂತ ಗೊತ್ತಿಲ್ಲ. ನನ್ನ ಪ್ರಕಾರ ಸಿಎಂ ಬದಲಾವಣೆ ಅಗತ್ಯ ಇಲ್ಲ ಎಂದು ತಮ್ಮ ತಂದೆಯ ಪರ ಮಾತನಾಡಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಅವರು ಮುಂದುವರಿಯುತ್ತಾರೆ. ಈ ಹಿಂದೆ ಅಧಿಕಾರ ಹಂಚಿಕೆ ಚರ್ಚೆ ಆಗಿತ್ತಾ ಅನ್ನೋದು ನನಗೆ ಗೊತ್ತಿಲ್ಲ. ಒಪ್ಪಂದದ ಬಗ್ಗೆ ತಂದೆಯಾಗಲಿ, ಯಾರೂ ನನಗೆ ಏನೂ ಹೇಳಿಲ್ಲ. ಇದು ಮಾಧ್ಯಮದ ಮುಂದೆ ಚರ್ಚೆ ಮಾಡುವ ವಿಷಯವೂ ಅಲ್ಲ ಎಂದು ಹೇಳಿದರು.
ಡಿಕೆಶಿ ಮತ್ತು ಶ್ರೀಗಳ ಹೇಳಿಕೆಗೆ ತಿರುಗೇಟು
ಸಿಎಂ ಬದಲಾವಣೆ ಮಾಡೋದು ನಮ್ಮ ಪಕ್ಷದ ಆಂತರಿಕ ವಿಚಾರ. ಬೇರೆ ಯಾರೇ (ನಿರ್ಮಲಾನಂದನಾಥ ಶ್ರೀಗಳ ಹೇಳಿಕೆ ಕುರಿತು) ಹೇಳಿದರೂ ಬದಲಾವಣೆ ಆಗಲ್ಲ. ಹೈಕಮಾಂಡ್ (High Command)ನಿರ್ಧಾರ ಅಂತಿಮ. ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆಯುತ್ತಾ ಇದ್ದಾರೆ. ಶಾಸಕರು ಸಿದ್ದರಾಮಯ್ಯ ಪರ ಇದ್ದಾರೆ. ಸಿಎಂ ಮೇಲೆ ಯಾವುದೇ ದೂರು ಇಲ್ಲ ಎಂದು ಡಿ.ಕೆ. ಶಿವಕುಮಾರ್ (D.K. Shivakumar) ಅವರ ಟ್ವೀಟ್‌ಗೆ ಪರೋಕ್ಷ ತಿರುಗೇಟು ನೀಡಿದರು.






