Home State Politics National More
STATE NEWS

Indira Canteen ಊಟಕ್ಕಿಲ್ಲ ಬೇಡಿಕೆ: ಕಾಂಗ್ರೆಸ್‌ ಸರ್ಕಾರ ಬಂದರೂ ಬದಲಾಗಲಿಲ್ಲ ಇಂದಿರಾ ಕ್ಯಾಂಟೀನ್ ವೈಫಲ್ಯತೆ!

Indira Canteens
Posted By: Meghana Gowda
Updated on: Nov 27, 2025 | 6:40 AM

ಬೆಂಗಳೂರು: ಬಿಲ್ (Bill)ಪಾವತಿಸದ ಕಾರಣಕ್ಕಾಗಿ ಹಲವು ಇಂದಿರಾ ಕ್ಯಾಂಟೀನ್‌ಗಳ ಕಾವೇರಿ ನೀರಿನ ಸಂಪರ್ಕವನ್ನು (Cauvery water supply) ಕಡಿತಗೊಳಿಸಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಊಟ ಮತ್ತು ತಿಂಡಿಯ ಗುಣಮಟ್ಟದ ಕೊರತೆಯಿಂದಾಗಿ ಇಂದಿರಾ ಕ್ಯಾಂಟೀನ್‌ಗಳನ್ನು ಬಳಸುವವರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡುಬಂದಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Congress government) ಮತ್ತೆ ಅಧಿಕಾರಕ್ಕೆ ಬಂದ ನಂತರ ಬಡವರಿಗೆ ಕಡಿಮೆ ದರದಲ್ಲಿ ಊಟ-ತಿಂಡಿ ಒದಗಿಸುವ ಇಂದಿರಾ ಕ್ಯಾಂಟೀನ್‌ಗಳ  (Indira Canteen) ಚಿತ್ರಣವನ್ನು ಬದಲಾಯಿಸುವ ಮತ್ತು ಅವುಗಳನ್ನು ಆಕರ್ಷಕಗೊಳಿಸುವ ಮಹತ್ವದ ಘೋಷಣೆಗಳನ್ನು ಮಾಡಲಾಗಿತ್ತು. ಆದರೆ, ಸರ್ಕಾರ ಬದಲಾದರೂ ಕ್ಯಾಂಟೀನ್‌ಗಳ ಸ್ಥಿತಿ ಮಾತ್ರ ಬದಲಾಗಿಲ್ಲ. ಘೋಷಣೆಗಳು ಕೇವಲ ಮಾತುಗಳಾಗಿಯೇ ಉಳಿದಿದ್ದು, ಹೊಸ ಕ್ಯಾಂಟೀನ್‌ಗಳ ಯೋಜನೆಗಳು ಟೆಂಡರ್ ಹಂತದಲ್ಲೇ ಸ್ಥಗಿತಗೊಂಡಿವೆ.

ಕ್ಯಾಂಟೀನ್‌ಗಳನ್ನು ಆಕರ್ಷಕಗೊಳಿಸುವುದು, ರಾಗಿಮುದ್ದೆ ಊಟ (Ragi Mudde)  ಸೇರಿದಂತೆ ಊಟ ಮತ್ತು ತಿಂಡಿ ಮೆನುವನ್ನು ಬದಲಾಯಿಸುವ ಮಾತುಗಳು ಇನ್ನೂ ಜಾರಿಯಾಗಿಲ್ಲ. ಒಟ್ಟು 52 ಹೊಸ ಇಂದಿರಾ ಕ್ಯಾಂಟೀನ್‌ಗಳ ಸ್ಥಾಪನೆಗೆ ಟೆಂಡರ್ ಕರೆಯಲಾಗಿತ್ತಾದರೂ, ಅದರಲ್ಲಿ 51 ಕ್ಯಾಂಟೀನ್‌ಗಳ (51canteens) ಟೆಂಡರ್ ಪ್ರಕ್ರಿಯೆ ಹಂತದಲ್ಲೇ ಸ್ಥಗಿತಗೊಂಡಿದೆ. ಕೇವಲ ಏರ್‌ಪೋರ್ಟ್‌ನಲ್ಲಿ ಮಾತ್ರ ಒಂದು ಹೊಸ ಇಂದಿರಾ ಕ್ಯಾಂಟೀನ್ ಶುರುವಾಗಿದೆ.

23 ಮೊಬೈಲ್ ಇಂದಿರಾ ಕ್ಯಾಂಟೀನ್‌ಗಳು ಸ್ಥಗಿತಗೊಂಡು ಒಂದು ವರ್ಷ ಕಳೆದಿದ್ದು, ಒಟ್ಟು 175 ಇಂದಿರಾ ಕ್ಯಾಂಟೀನ್‌ಗಳ ಪೈಕಿ 14 ಕ್ಯಾಂಟೀನ್‌ಗಳು ನಾನಾ ಕಾರಣಗಳಿಗೆ ಸ್ಥಗಿತಗೊಂಡಿವೆ.

Shorts Shorts